ಬಾಲಿವುಡ್

Hardik Pandya: ಪ್ಲೀಸ್‌ ಫ್ಯಾನ್ಸ್‌‌ ವಾರ್‌ ನಿಲ್ಲಿಸಿ, ಹಾರ್ದಿಕ್‌ ಪರ ನಿಂತ ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌!

ಹಾರ್ದಿಕ್‌ ಪಾಂಡ್ಯ (Hardik Pandya) ಮುಂಬೈ ಕ್ಯಾಪ್ಟನ್‌ (Mumbai Indians) ಆದಾಗಿನಿಂದಲೂ ಎಲ್ಲವೂ ಸರಿಯಿಲ್ಲ ಅಂತ ಗೊತ್ತಾಗ್ತಿದೆ. ಸದ್ಯಕ್ಕೆ ಭಾರತದಲ್ಲಿ ಹಾರ್ದಿಕ್‌ ಪಾಂಡ್ಯ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿದ್ದಾರೆ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಗುಂಪುಗಾರಿಕೆಯಿಂದಾಗಿ ಹಿನ್ನಡೆ ಅನುಭವಿಸಿದೆ. ಸದ್ಯದ ಪರಿಸ್ಥಿತಿ ಏನೆಂದರೆ ಮುಂಬೈ ಇಂಡಿಯನ್ಸ್ ತಂಡ ಎರಡು ಗುಂಪುಗಳಾಗಿ ಒಡೆದಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ತಂಡವು ಮಾಜಿ ನಾಯಕ ರೋಹಿತ್ ಶರ್ಮಾ ಅವರ ಬೆಂಬಲಿಗರು ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರ ತಂಡವಾಗಿ ಬದಲಅಗಿದೆ. ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರಂತಹ ತಾರೆಯರು ರೋಹಿತ್ ಶರ್ಮಾ ಅವರೊಂದಿಗೆ ಇದ್ದಾರೆ. ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯ ಅವರನ್ನು ಬೆಂಬಲಿಸುವ ಪ್ರಮುಖ ತಾರೆ.

ಈ ನಡುವೆ ತಂಡದ ಮ್ಯಾನೇಜ್‌ಮೆಂಟ್ ನೂತನ ನಾಯಕ ಹಾರ್ದಿಕ್ ಪಾಂಡ್ಯಗೆ ಬೆಂಬಲ ನೀಡುತ್ತಿದೆ. ಮೊದಲೆರಡು ಪಂದ್ಯಗಳು ಸೋತಾಗ ಗ್ರೂಪಿಸಂ ತಂಡಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ಹಾರ್ದಿಕ್‌ ಪಾಂಡ್ಯ (Hardik Pandya) ಮುಂಬೈ ಕ್ಯಾಪ್ಟನ್‌ (Mumbai Indians) ಆದಾಗಿನಿಂದಲೂ ಎಲ್ಲವೂ ಸರಿಯಿಲ್ಲ ಅಂತ ಗೊತ್ತಾಗ್ತಿದೆ. ಮೊನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌‌ (Gujarat titans) ವಿರುದ್ಧ ಸೋತಿದ್ದರು. ಹಾರ್ದಿಕ್ ಪಾಂಡ್ಯ ರೋಹಿತ್‌ ಶರ್ಮಾನ (Rohit Sharma) ನಡೆಸಿಕೊಂಡ ರೀತಿ ನಿಜಕ್ಕೂ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.

Leave a Reply

Your email address will not be published. Required fields are marked *

Back to top button
error: Content is protected !!