ಅಪರಾಧ
Trending
ಬ್ರೇಕಿಂಗ್: ಹುಬ್ಬಳ್ಳಿಯಲ್ಲಿ 15 ವರ್ಷದ ಬಾಲಕನ ಹತ್ಯೆ – ಸಣ್ಣವರ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯ
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಬಾಲಕರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಬಳಿ ಈಗಷ್ಟೇ ನಡೆದಿದೆ.

ಹೌದು.. ಹುಬ್ಬಳ್ಳಿಯಲ್ಲಿ 15 ವರ್ಷ ಬಾಲಕನ ಕೊಲೆಯಾಗಿದೆ. ಸ್ನೇಹಿತನೇ ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಹತ್ಯೆಯಾದವನು 15 ವರ್ಷದ ಬಾಲಕ ಚೇತನ್ ಎಂದು ಹೇಳಲಾಗಿದೆ. ಆತನ ಸ್ನೇಹಿತ 13 ವರ್ಷದ ಬಾಲಕನೊಬ್ಬ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇಬ್ಬರ ನಡುವೆ ನಡೆದಿದ್ದ ಚಿಕ್ಕ ಜಗಳದ ವೇಳೆ ಏಕಾಏಕಿಯಾಗಿ 15 ವರ್ಷದ ಬಾಲಕ ಚೇತನ್ಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಚೇತನ್ನನ್ನ ಹುಬ್ಬಳ್ಳಿ ಕಿಮ್ಸ್ಗೆ ರವಾನಿಸಲಾಗಿದೆ. ಆದ್ರೆ ಮಾರ್ಗಮಧ್ಯದಲ್ಲಿಯೇ ಚೇತನ್ ಅಸುನೀಗಿದ್ದಾನೆ. ಸ್ಥಳಕ್ಕೆ ಹುಬ್ಬಳ್ಳಿಯ ಕಮರಿಪೇಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.