
ಹುಬ್ಬಳ್ಳಿ: ಮರಳು ಮಾಫಿಯಾ ವಿರುದ್ಧ ನಾಳೆ ಮೇ 6 ರಂದು ಬೈಕ್ ರಾಲಿ ಮೂಲಕ ಪ್ರತಿಭಟನೆ ನಮ್ಮ ಧಾರವಾಡದ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಧಾರವಾಡ ಜಿಲ್ಲಾಧ್ಯಕ್ಷರಾದ ಮಂಜುನಾಥ ಲೂತಿಮಠ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆ. 11 ಕ್ಕೆ ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಬೈಕ್ ರ್ಯಾಲಿ ಆರಂಭವಾಗಿ ಧಾರವಾಡದ ಜಿಲ್ಲಾಧಿಕಾರಿ ಕಛೇರಿಗೆ ತೆರಳಲಾಗುವುದು ಎಂದರು.
ಮರಳು, ಮಣ್ಣು, ಕಲ್ಲು ಕಳ್ಳರಿಗೆ ಅಧಿಕಾರಿಗಳು ತಕ್ಕ ಕಡಿವಾಣ ಹಾಕಬೇಕು, ಸಂಬಂಧಪಟ್ಟ ಅಧಿಕಾರಿಗಳು ತಕ್ಕ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಹೋರಾಟವನ್ನುಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಜರುಗಿಸಿ ಮರಳು ಮಾಫಿಯಾ ತಡೆಗಟ್ಟಬೇಕು ಇಲ್ಲವಾದರೇ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರವೇ ಪ್ರವೀಣ್ ಗಾಯಕವಾಡಅ ಮಿತ್ ಉಪಸ್ಥಿತರಿದ್ದರು