ಬೆಂಗಳೂರು: ಸೋನು ನಿಗಮ್ ಬ್ಯಾನ್, ಸೋನು ನಿಗಮ್ ಯಾವುದೇ ಕನ್ನಡ ಚಿತ್ರಗಳಲ್ಲಿ ಹಾಡಲು ಅವಕಾಶವಿಲ್ಲ, ಯಾವುದೇ ಮ್ಯೂಸಿಕಲ್ ನೈಟ್ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಹ್ವಾನ ಮಾಡುವಂತಿಲ್ಲ, ಸೋನು ನಿಗಮ್ ಹಿಂದಿನ ಹಾಡುಗಳನ್ನು ಪ್ರಚಾರ ಅಥವಾ ಪ್ರದರ್ಶನಕ್ಕೆ ಬಳಸಬಾರದು ಎಂದು ಕನ್ನಡ ಫಿಲಂ ಚೇಂಬರ್ ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಕನ್ನಡ ಸಂಗೀತ ನಿರ್ದೇಶಕರು ಮತ್ತು ನಿರ್ಮಾಪಕರು ಈ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ.
ಕನ್ನಡಿಗರ ಭಾವನೆಗಳನ್ನು ಕೆರಳಿಸಿದ್ದಕ್ಕಾಗಿ ಸೋನು ನಿಗಮ್ ಅವರನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಿ ಮಹತ್ವದ ನಿರ್ಧಾರವನ್ನು ಕರ್ನಾಟಕ ಫಿಲಂ ಚೇಂಬರ್ ಪ್ರಕಟಿಸಿದೆ. ಇದನ್ನು ಕನ್ನಡ ಚಿತ್ರರಂಗದ ಸಾಂಸ್ಕೃತಿಕ ಗೌರವವನ್ನು ಕಾಯುವ ತೀರ್ಮಾನ ಎಂದು ಫಿಲಂ ಚೇಂಬರ್ ಸ್ಪಷ್ಟ ಪಡಿಸಿದೆ. ಇನ್ನು ಈಗ ಸದ್ಯ ಕಾಡುತ್ತಿರುವ ಪ್ರಶ್ನೆ ಏನಂದ್ರೆ ಸೋನು ನಿಗಮ್ ಕ್ಷಮೆ ಕೇಳಿದರೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರಬಹುದಾ ಅನ್ನೋದು!? ಇದಕ್ಕೆ ನಿಮ್ಮ ಅಭಿಪ್ರಾಯ ಏನು ಅಂತ ಕಾಮೆಂಟ್ ಮಾಡಿ ತಿಳಿಸಿ.