ಉನ್ನತ ಸುದ್ದಿ
Trending
ಆಟೋದಲ್ಲಿ ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಆಟೋದಲ್ಲಿ ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಹುಬ್ಬಳ್ಳಿ : ಪ್ರಯಾಣಿಕರೊಬ್ಬರು ಆಟೋದಲ್ಲಿ ತಮ್ಮ
ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುವಿನ ಬ್ಯಾಗ್‌ನ್ನು ಮರೆತು ಹೋಗಿದ್ದರು. ಆಟೋ ಚಾಲಕ ಆ ಬ್ಯಾಗ್‌ನ್ನು ನೋಡಿದ ತಕ್ಷಣ ಕೂಡಲೆ ಪೊಲೀಸರ ಮೂಲಕ ಮಾಲೀಕರಿಗೆ ಒಪ್ಪಿಸಿ ಪ್ರಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು ರೈಲ್ವೇ ಸ್ಟೇಷನ್ ನಿಂದ ಗೋಕುಲ್ ರೋಡ್ ಮಂಜುನಾಥ್ ನಗರಕ್ಕೆ ಹೋಗುವುದಕ್ಕೆ ಆಟೋ ಹತ್ತಿದ್ದಾರೆ.
ಆದ್ರೆ ಆಟೋದಲ್ಲಿ ಎಲೆಕ್ಟ್ರಾನಿಕ್ ವಸ್ತುವಿನ ಬ್ಯಾಗ್ ಮರೆತು ಮನೆಗೆ ಹೋಗಿದ್ದರು. ಆಗ ಹುಬ್ಬಳ್ಳಿಯ ಆಟೋ ಚಾಲಕ ಅಂಬರೀಶ ಕದಂ ಅವರು ಉತ್ತರ ಕರ್ನಾಟಕದ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರು ಸೇರಿಕೊಂಡು ಆ ವಸ್ತುವನ್ನು ಗೋಕುಲ್ ರೋಡ್ ಪೊಲೀಸರ ಮೂಲಕ, ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆಗೆ ಸಾಕ್ಷೀಯಾಗಿದ್ದಾರೆ. ಪೊಲೀಸರು ಕೂಡ ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.