Uncategorized

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಹೇಶ ಟೆಂಗಿನಕಾಯಿ, ರಾಜೀವ ವಾಗ್ದಾಳಿ

ಹುಬ್ಬಳ್ಳಿ: ರಾಜ್ಯಾದ್ಯಂತ ಕಾಂಗ್ರೆಸ್ ಸರಕಾರದ జనవణధి సంతియ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆ ಮೇ 11 ರಂದು ಸಾಯಂಕಾಲ ಹುಬ್ಬಳ್ಳಿಯ ದುರ್ಗದ ಬೈಲ್ ಸರ್ಕಲ್ ನಿಂದ ಮೂರು ಸಾವಿರ ಮಠದ ಮೈದಾನದವರೆಗೆ ಯಾಲಿ ಮುಖಾಂತರ ಆಗಮಿಸಿ ಜನಾಕ್ರೋಶ ಸಭೆಯ ಸಮಾರೋಪ ನಡೆಯಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಇಲ್ಲಿಯ ಅರವಿಂದ ನಗರದ ಧಾರವಾಡ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆ ಹಾಗೂ ಧಾರವಾಡ ಗ್ರಾಮಾಂತರ ಪದಾಧಿಕಾರಿಗಳ, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಸರ್ಕಾರ ಎಂದು ಹೇಳಿ ಅಧಿಕಾರಕ್ಕೆ ಬಂದು ಇದೀಗ ಅಗತ್ಯ ದಿನಬಳಕೆ ವಸ್ತುಗಳು ಸೇರಿದಂತೆ, ಜನನ-ಮರಣವಾಗಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸಹ ಬೆಲೆ ಏರಿಕೆ ಮಾಡಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರು ಹೈರಾನ ಆಗಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಸಭೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ, ಎನ್. ರವಿಕುಮಾರ್ ಹಾಗೂ ಶಾಸಕ,

ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಮಾತನಾಡಿ ಜನಾಕ್ರೋಶ ಸಭೆಯಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಕನಿಷ್ಠ ಪಕ್ಷ ಹತ್ತರಿಂದ ಹದಿನೈದು ಸಾವಿರ ಜನ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದ್ದು ರಾಜ್ಯ ಸರಕಾರವು ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ಪತ್ರಿಕೆಗಳ ಮುಖಾಂತರ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದು ಈ ಸರ್ಕಾರ ಬರೀ ಸುಳ್ಳು ಹೇಳುವುದರಲ್ಲಿ ಸಮಯವನ್ನು ಕಳೆಯುತ್ತಿದೆ ಇದೊಂದು ಅವಿವೇಕಿ ಸರ್ಕಾರವೆಂದು ದೂರಿದರು.

ತಿಪ್ಪಣ್ಣ ಮಜ್ಜಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಲಿಂಗರಾಜ ಪಾಟೀಲ, ಮಹೇಂದ್ರ ಕೌತಾಳ, ಮಲ್ಲಿಕಾರ್ಜುನ್ ಬಾಳಿಕಾಯಿ, ಸತೀಶ ಶೇಜವಾಡಕರ್, ಮಣಿಕಂಠ ಶ್ಯಾಗೋಟಿ, ನಾರಾಯಣ ಜನತಾರಘರ್, ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ, ಮಹಿಳಾ ಅಧ್ಯಕ್ಷೆ ಚೈತ್ರ ಶಿರೂರು, ಸೀಮಾ ಲಡ್ಡಾ ಜಿಲ್ಲಾ ಗ್ರಾಮಾಂತರ ಪದಾಧಿಕಾ-ರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!