
ಹುಬ್ಬಳ್ಳಿ: ಉಗ್ರರ ಅಡಗುತಾಣದ ಮೇಲೆ ದಾಳಿ ಮಾಡಿ “ಆಪರೇಷನ್ ಸಿಂಧೂರ’ ಯಶಸ್ಸಿಗೆ ಹುಬ್ಬಳ್ಳಿಯಲ್ಲಿಹಿಂದೂ ಪರಿಷದ್ ಸಂಘಟನೆ ಸಂಭ್ರಮಾಚರಣೆ ಮಾಡಿದ್ದಾರೆ. ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ವಿನಾಯಕ್ ಮಾಳದಕರ್ ನೇತೃತ್ವದಲ್ಲಿ ವಿಜಯೋತ್ಸವವನ್ನು ಗೋಕುಲ ರೋಡ್‌ನ ಅಕ್ಷಯ್ ಪಾರ್ಕ್ ನಲ್ಲಿ ಆಚರಿಸಿದರು.
ತಿರಂಗ ಹಿಡಿದು ಭಾರತ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತಾ ಜೈಕಾರ ಹಾಕಿದರು. ಆಪರೇಷನ್ ಸಿಂಧೂರ ಯಶಸ್ಸಿಗೆ ಕಾರಣರಾದ ಸೈನಿಕರಿಗೆ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮಣ ಮೊರಬ, ಗಣೇಶ ಕದಮ್, ಪ್ರಭು, ಸತಿಶ, ಅಭಿಶೇಕ ಮೋಹನ್ ರೊಕಡೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.