Uncategorized
Trending
*ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ; ಮನೆ ಒಳಗೆ ನುಗ್ಗಿದ ನೀರು ಅಸ್ತವ್ಯಸ್ತಗೊಂಡ ಜನರು*
ಹುಬ್ಬಳ್ಳಿ: ಇಂದು ಸಾಯಂಕಾಲ ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು ಮನೆ ಒಳಗೆ ನೀರು ನುಗ್ಗಿ ಜನರಿಗೆ ಅಸ್ತವ್ಯಸ್ತವಾಗಿರು ಖಂಡು ಬಂದಿದೆ.
ಹುಬ್ಬಳ್ಳಿಯ ಆನಂದ ನಗರ ರೋಡ್ ಗಣೇಶ ನಗರದಲ್ಲಿ ಮನೆ ಒಳಗೆ ನೀರು ನುಗ್ಗಿದೆ. ಮನೆಯಲ್ಲಿನ ವಸ್ತುಗಳು ಹಾಳಾಗಿವೆ. ಇದಕ್ಕೆ ಕಾರಣ ಸರಿಯಾದ ಗಟರ ವ್ಯವಸ್ಥೆ ಇಲ್ಲದೆ ಮಳೆ ನೀರು ನೀರು ಮನೆ ಒಳಗೆ ನುಗ್ಗಿ ಅಲ್ಲಿನ ನಿವಾಸಿಗಳ ಗೋಳು ಹೇಳತೀರದಾಗಿದೆ. ಇಂದು ಸಾಯಂಕಾಲ ಗುಡುಗು ಸಮೇತ ಏಕಾಏಕಿ ಸುರಿದ ಮಳೆಯಿಂದ ಜನರಿಗೆ ತಂಪಿನ ಜೊತೆಗೆ ಅಸ್ತವ್ಯಸ್ತತೆ ಕೂಡ ಆಗಿದೆ. ಮಹಾನಗರ ಪಾಲಿಕೆ ಮಳೆಗಾಲ ಆರಂಭ ಆಗೊದರ ಒಳಗೆ ಗಟರ್, ಚರಂಡಿ ಸಮಸ್ಯೆಗಳನ್ನು ಬಗೆ ಹರಿಸಬೇಕಾಗಿದೆ.