ಕುಂದಾಪುರ : ಮದುವೆಗೆ ತಂದೆಯನ್ನೇ ದೂರ ಇಟ್ಟಿದ್ದಳೇ ಚೈತ್ರಾ ಕುಂದಾಪುರ? ಅವರ ಮದುವೆ ಒಪ್ಪಲ್ಲ ಎಂದ ತಂದೆ….

ಕುಂದಾಪುರ : ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಕೆಲವೇ ದಿನಗಳ ಹಿಂದೆ ಹಸೆಮಣೆ ಏರಿ ಸುದ್ದಿಯಾಗಿದ್ದರು. ಈ ವಿವಾಹ ಸರಳವಾಗಿ ನಡೆದಿದ್ದರೂ ಕಿರುತೆರೆ ನಟ ನಟಿಯರು ಇದರಲ್ಲಿ ಭಾಗವಹಿಸಿದ್ದರು. ಚೈತ್ರಾ ಅವರು ತನ್ನ ಬಹುಕಾಲದ ಪ್ರೇಮಿ, ಶ್ರೀಕಾಂತ್ ಕಶ್ಯಪ್ ರನ್ನು ವರಿಸಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಮಗಳ ಮದುವೆಗೆ ತಂದೆಯನ್ನೇ ದೂರ ಇಡಲಾಗಿತ್ತೇ? ಚೈತ್ರಾ ತಂದೆಯ ಮಾತು ಕೇಳಿದರೆ ಇದು ಸತ್ಯ ಎನಿಸದೇ ಇರದು.
ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ಅವರು ಮಾತನಾಡಿ “ನನ್ನ ಮಗಳು ವಿವಾಹಕ್ಕೆ ನನಗೆ ಸರಿಯಾದ ಆಮಂತ್ರಣ ಕೊಟ್ಟಿಲ್ಲ’ ಎಂದು ಆರೋಪಿಸಿದ್ದಾರೆ.
ಮಗಳ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ’ ಎಂದು ಬಾಲಕೃಷ್ಣ ಹೇಳಿದ್ದಾರೆ.
“ಚೈತ್ರಾ ಬಿಗ್ ಬಾಸ್ ಮನೆಗೆ ಹೋಗುವಾಗಲೂ ನನಗೆ ಹೇಳಿಲ್ಲ. ನನ್ನನ್ನು ಮನೆಯಲ್ಲಿ ಬಿಟ್ಟು ಅಮ್ಮ-ಮಗಳು ಬೀಗ ಹಾಕಿ ಹೋಗಿದ್ದರು. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥ. ಚೈತ್ರಾ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ’ ಎಂದು ಬಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.