
ಹುಬ್ಬಳ್ಳಿ: ಭಾರತೀಯ ಸೇನೆ ನಡೆಸಿದ ’ಆಪರೇಷನ್ ಸಿಂಧೂರ್’ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಆಯೋಜಿಸಿದ್ದ ತಿರಂಗ ಯಾತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು.
ನಗರದ ಮೂರುಸಾವಿರ ಮಠದ ಮೈದಾನದಿಂದ ಆರಂಭಗೊಂಡ ರ್‍ಯಾಲೆಯು ಅಂಬೇಡ್ಕರ್ ಪುತ್ತಳಿವರೆಗೆ ನಡೆಯಿತು. ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟಿನಿಂದ ಹುಬ್ಬಳ್ಳಿಯಲ್ಲಿ ನಡೆದ ತಿರಂಗ ಯಾತ್ರೆ ರ್‍ಯಾಲಿಯ ನೇತೃತ್ವವನ್ನು ಸಚಿವ ಜೋಶಿ ವಹಿಸಿದ್ದರು.
ತಿರಂಗಾ ಯಾತ್ರೆಯ ಉದ್ದಕ್ಕೂ ಭಾರತೀಯ ಸೇನಾ ಪಡೆಗಳ ಪರವಾಗಿ ಜೈಕಾರದ ಘೋಷಣೆಗಳನ್ನು ಕೂಗಲಾಯಿತು. ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳನ್ನು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಕೂಗಿ ರಾಷ್ಠ್ರಾಭಿಮಾನ ಮೆರೆದರು.
ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಎಸ್.ವಿ. ಸಂಕನೂರು, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಷಣ್ಮುಖ ಗುರಿಕಾರ, ದತ್ತಮೂರ್ತಿ ಕುಲಕರ್ಣಿ, ಸಿದ್ದು ಮೊಗಲಿಶೆಟ್ಟರ, ರವಿ ನಾಯಕ, ಪ್ರಶಾಂತ ಹಾವಣಗಿ, ಐ.ಸಿ. ಗೋಕುಲ, ಸಂದೀಪ ಬೂದಿಹಾಳ, ವಿರೇಶ ಸಂಗಳದ, ಸಂತೋಷ ವೆರ್ಣೇಕರ ಸೇರಿದಂತೆ ಸಾವಿರಾರು ಜನರು ತಿರಂಗಯಾತ್ರೆಯಲ್ಲಿ ಭಾಗಿಯಾಗಿದ್ದರು.