Uncategorized
Trending
ಹುಬ್ಬಳ್ಳಿ ಗೋಕುಲ ರೋಡ್‌ನಲ್ಲಿ ಚಿರತೆ ಪ್ರತ್ಯಕ್ಷ -ಸಾರ್ವಜನಿಕರೇ ಹುಷಾರ್
ಹುಬ್ಬಳ್ಳಿ: ಹುಬ್ಬಳ್ಳಿ ಜನರೇ ಹುಷಾರ್... ಗೋಕುಲ್ ರೋಡ್‌ದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

ಹೌದು. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿನ ಭಾರತಿನಗರದಲ್ಲಿ ಏಕಾಏಕಿ ಚಿರತೆ ಪ್ರತ್ಯಕ್ಷವಾಗಿದೆ. ತಡರಾತ್ರಿ ಚಿರತೆ ಭಾರತಿನಗರ ಸುತ್ತಮುತ್ತ ಓಡಾಡಿದೆ. ಚಿರತೆ ಅಡ್ಡಾಡುವ ದೃಶ್ಯವು ಸಿಸಿಟಿವಿ ಸೆರೆಯಾಗಿದೆ. ಜಿಮ್ಯಾಟೋ ಡೆಲಿವರಿ ಬಾಯ್ ಕಣ್ಣಿಗೆ ಬಿದ್ದ ಚಿರತೆ, ನಾಯಿವೊಂದನ್ನ ಎತ್ತಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಚಿರತೆ ದೃಶ್ಯಗಳು ಸ್ಥಳೀಯ ಜನರಲ್ಲಿ ಆತಂಕ ವ್ಯಕ್ತಪಡಿಸಿದೆ.