ಉನ್ನತ ಸುದ್ದಿ
Trending
ಬೆಂಗಳೂರು: ಸಿಸಿಬಿ ಕಚೇರಿಗೆ ನುಗ್ಗಿದ ಮಳೆ ನೀರು – ತಿಂಗಳಿಗೆ ಲಕ್ಷ ಲಕ್ಷ ಬಾಡಿಗೆ ಕಟ್ಟಿದ್ರೂ ಉಪಯೋಗವಿಲ್ಲ
ಬೆಂಗಳೂರು: ಬೆಂಕಿಯಿಂದ ಜಾರಿ ಬಾಣಲೆಗೆ ಬಿದ್ದಂತಾಗಿದೆ ಸಿಸಿಬಿ ಪರಿಸ್ಥಿತಿ. ಚಾಮರಾಜಪೇಟೆ ಕಟ್ಟದ ಶಿಥಿಲಾವಸ್ಥೆಯಲ್ಲಿದೆ ಅಂತ ಶಾಂತಿನಗರ ಬಾಡಿಗೆ ಕಟ್ಟಡಕ್ಕೆ ಸಿಸಿಬಿ ಕಟ್ಟಡ ಶಿಫ್ಟ್ ಆಗಿತ್ತು. ಸದ್ಯ ಅಲ್ಲಿ ಮುಳುಗಡೆ ಭೀತಿ ಎದುರಾಗಿದೆ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ತತ್ತರಿಸಿದೆ. ಇನ್ನೂ ರಾತ್ರಿಯಿಡಿ ಸುರಿದ ಮಳೆಗೆ ರಾಜಕಾಲುವೆಗಳು ತುಂಬಿ ಹರಿದು ಅಲ್ಲಲ್ಲಿ ಅವಾಂತರಗಳನ್ನ ಸೃಷ್ಟಿ ಮಾಡಿದೆ.

ಈ ಅವಾಂತರಕ್ಕೆ ನಗರದ ಸಿಸಿಬಿ ಕಚೇರಿಯೂ ಒಳಗಾಗಿದೆ. ಸದ್ಯ ಶಾಂತಿನಗರದ ಸಿಸಿಬಿ ಕಚೇರಿಯಲ್ಲಿ ಮಂಡಿಯುದ್ದ ನೀರು ನಿಂತಿದ್ದು ಇನ್ನೂ ನೀರಿನ ಮಟ್ಟ ಕಡಿಮೆಯಾಗಿಲ್ಲ. ಚಾಮರಾಜಪೇಟೆ ಹಳೆ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇರೋ ಕಾರಣ ಶಾಂತಿನಗರ ಸಾರಿಗೆ ಇಲಾಖೆಗೆ ಸೇರಿದ ಕಟ್ಟಡಕ್ಕೆ ಸಿಸಿಬಿ ಕಚೇರಿಯನ್ನ ಶಿಫ್ಟ್ ಮಾಡಲಾಗಿತ್ತು. ಸದ್ಯ ಈ ಕಟ್ಟಡಕ್ಕೆ ತಿಂಗಳಿಗೆ ಸುಮಾರು 27 ಲಕ್ಷ ಬಾಡಿಗೆ ಅಂತ ಹೇಳಲಾಗ್ತಿದೆ. ಅಷ್ಟು ಬಾಡಿಗೆ ನೀಡಿದ್ರೂ ಕಟ್ಟಡದಲ್ಲಿ ಸರಿಯಾದ ನಿರ್ವಹಣೆಯಿಲ್ಲದೆ ಈ ಅವಾಂತರ ಸೃಷ್ಟಿಯಾಗಿದೆ. ಪ್ರತಿಬಾರಿಯೂ ಮಳೆ ಹೆಚ್ಚಾದಾಗ ಈ ಭಾಗದಲ್ಲೆ ಇದೇ ಪರಿಸ್ಥಿತಿ ಕಾಣ ಸಿಗುತ್ತೆ. ಸದ್ಯ ಮಳೆ ನೀರಿನಿಂದಾಗಿ ಸಿಸಿಬಿ ಕೆಳಮಹಡಿಯ ಕಚೇರಿಗಳಿಗೆ ನೀರು ನುಗ್ಗಿ ಕೆಲ ದಾಖಲೆ ಪತ್ರಗಳು ಹಾನಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಸಿಸಿಬಿಗೆ ಒಂದು ಶಾಶ್ವತ ಪರಿಹಾರು ನೀಡಬೇಕಿದೆ.