ಹುಬ್ಬಳ್ಳಿ-ಧಾರವಾಡದಲ್ಲಿ ಪಾಕಿಸ್ತಾನದ ಮಹಿಳೆ ಪತ್ತೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಓರ್ವ ಪಾಕಿಸ್ತಾನದ ಮಹಿಳೆ ಇರುವುದನ್ನು ಪತ್ತೆ ಹಚ್ಚಿದ್ದೇವೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು, ಮಹಿಳೆ ದೀರ್ಘಕಾಲದ ವೀಸಾ ಮೇಲೆ ವಾಸವಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಅವರ ಮಾಹಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೀಡಿದ್ದೇವೆ. ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ, ಬಂದ ಬಳಿಕ ಅವರನ್ನು ವಾಪಸ್ ಕಳಿಸಬೇಕಾ? ಅಥವಾ ಏನ್ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ಹುಬ್ಬಳ್ಳಿ-ಧಾರವಾಡ ಸ್ಥಳೀಯ ಶಾಸಕರು ಧಾರವಾಡ ಜನ್ನತ್ ನಗರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ಬಂದ ತಕ್ಷಣವೇ ತಪಾಸಣೆ ಮಾಡಿ ಮಾಹಿತಿ ಕಲೆ ಹಾಕಿದ್ದೇವೆ. ಜನ್ನತ್ ನಗರದ ಬಿಲಾಲ್ ಮಸೀದಿ ಹಾಗು ಆರೋಗ್ಯ ನಗರದ ಯೂಸುಫಿಯಾ ಮಸೀದಿಯಲ್ಲಿ ಹೊರಗಿನವರು ಬಂದಿದ್ದಾರೆ. ಅವರು ಸೂರತ್ ಮೂಲದವರು ಅನ್ನೋದ ಪತ್ತೆಯಾಗಿದೆ ಎಂದು ತಿಳಿಸಿದರು.
ಅವಳಿನಗರದಲ್ಲಿ ಯಾವುದೇ ವಿದೇಶಿ ಪ್ರಜೆಗಳು ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅತಿಹೆಚ್ಚು ಸೀಮ್ ಕಾರ್ಡ್ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಇವರ ಪೂರ್ವ ಪರ ಎಲ್ಲ ಮಾಹಿತಿ ಕಲೆ ಹಾಕಿದ್ದೇವೆ. ಕೆಲವರು ಮಸೀದಿಯಲ್ಲಿ ತರಬೇತಿ ಪಡೆದುಕೊಳ್ಳಲು ಬಂದಿದ್ದಾರೆ. ಈ ಬಗ್ಗೆ ಪಾಲಿಕೆ ವಲಯ ಅಧಿಕಾರಿಗಳು ಸಹ ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದರು.
ಸೋಷಿಯಲ್ ಮಿಡಿಯಾ ಮಾನಿಟರಿಂಗ್ ಸೆಲ್ ಆಕ್ಟಿವ್ ಆಗಿ ಕೆಲಸ ಮಾಡುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಯಾರಾದರೂ ಕೆಟ್ಟ, ತಪ್ಪು ಸಂದೇಶ ಹರಿಬಿಟ್ಟರೆ ಅಂತವರು ಬಗ್ಗೆ ಮಾಹಿತಿ ನೀಡಬಹುದು. ಅದರ ಲಿಂಕ್ ಪೊಲೀಸ್ ವಾಟ್ಸಪಗೆ ಕಳಿಸಿದ್ರೆ ಸಾಕು. ಆ ತರಹದ ವ್ಯಕ್ತಿ, ಖಾತೆಗಳನ್ನು ಮಾಹಿತಿ ನೀಡಿದರೆ ಸಾಕು. ತಪ್ಪು ಸಂದೇಶ ಹರಿಬಿಟ್ಟವರ ವಿರುದ್ಧ ತನಿಖೆ ಕೈಗೊಳ್ಳುತ್ತೇವೆ ಎಂದರು.
ಗೋಷ್ಠಿಯಲ್ಲಿ ಡಿಸಿಪಿ ಮಹಾನಿಂಗ ನಂದಗಾಂವಿ ಪಾಲ್ಗೊಂಡಿದ್ದರು
ಸುಧೀರ ಕುಲಕರ್ಣಿ ಹುಬ್ಬಳ್ಳಿ