Uncategorizedಉನ್ನತ ಸುದ್ದಿ
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ
ದಿನಾಂಕ 12/5/2025 ರಂದು ಹುಬ್ಬಳ್ಳಿಯ ಗುರುಸಿದ್ದೇಶ್ವರ ನಗರದ ಬಾಲಕ ಕು ಚೇತನ ರಕ್ಕಸಗಿ ಕೊಲೆಯಾಗಿತ್ತು. ಈ ಸಂಬಂಧ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಧಾರವಾಡ ಜಿಲ್ಲಾ ಘಟಕದ ವತಿಯಿಂದ ರಕ್ಕಸಗಿ ದಂಪತಿಗಳ ಸಮೂಹ ಧಾರವಾಡದಲ್ಲಿ ಮಾನ್ಯ ಜಿಲ್ಲಾ ಅಧಿಕಾರಿಗಳಿಗೆ ಈ ಕುಟುಂಬಕ್ಕೆ ಆರ್ಥಿಕ ನೆರವು, ಸರ್ಕಾರಿ ನೌಕರಿ ಮತ್ತು ನಿವೇಶನ ನೀಡಿ ಎಂದು ಮನವಿ ಸಲ್ಲಿಸಲಾಯಿತು.

ಜಿಲ್ಲಾ ಅಧ್ಯಕ್ಷರು ಶ್ರೀ ನಿಂಗಣ್ಣ ಕರಿಕಟ್ಟಿ, ಸದುಗೌಡಾ ಪಾಟೀಲ, ಪಂಚಸೇನಾ ಕಿತ್ತೂರು ಕರ್ನಾಟಕ ಅಧ್ಯಕ್ಷರು ಶಶಿಶೇಖರ ಡಂಗನವರ, ಪಂಚಮಸಾಲಿ ಮುಖಂಡರಾದ ರಾಜು ಕೊಟಗಿ, ಮಲ್ಲಿಕಾರ್ಜುನ ಹರಲಾಪುರ, ಡಾ. ಕೆ. ಬಿ ಮಧ್ನೂರ, ಮುತ್ತು ಬೆಳ್ಳಕ್ಕಿ, ಅಜ್ಜಪ್ಪ ಗುಲಾಲ, ಸಿದ್ದು ಹೆಬ್ಬಳ್ಳಿ, ಸಂಗನಗೌಡರ ಮತ್ತು ಅನೇಕ ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು.