Congress: ರಫೇಲ್ ಜೆಟ್‌ಗೆ ನಿಂಬೆ-ಮೆಣಸಿನಕಾಯಿ ಕಟ್ಟಿ ಕಾಂಗ್ರೆಸ್ ನಾಯಕ ವ್ಯಂಗ್ಯ! ಕಿಡಿಕಾರಿದ ಬಿಜೆಪಿ

ನವದೆಹಲಿ: ಪಹಲ್ಗಾಮ್ ದಾಳಿಯಿಂದಾಗಿ (Pahalgam Attack) ಇಡೀ ದೇಶದಲ್ಲಿ ಕೋಪದ ವಾತಾವರಣ ಸೃಷ್ಟಿಯಾಗಿದೆ. ಅತ್ತ ಭಾರತ ಸರ್ಕಾರ ಉಗ್ರರ ವಿರುದ್ಧ ಯಾವ ರೀತಿ ಪ್ರತೀಕಾರ ತೀರುಸುತ್ತೆ ಎಂದು ಕಾದು ನೋಡಬೇಕಿದೆ. ಈಗಾಗಲೇ ಪಹಲ್ಗಾಮ್ ದಾಳಿಯನ್ನು ಪಾಕಿಸ್ತಾನ ಪೋಷಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊಣೆಗಾರಿಕೆ ಹೊತ್ತುಕೊಂಡಿದೆ ಎಂದು ಭಾರತ ಆರೋಪಿಸಿದೆ. ಈ ದಾಳಿಯನ್ನು ಖಂಡಿಸಿರುವ ಭಾರತ, ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದೆ. ಇದೀಗ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರು ಭಾನುವಾರ ವಾರಾಣಾಸಿಯಲ್ಲಿ ರಫೇಲ್ ಜೆಟ್‌ನ ಆಟಿಕೆ ಮಾದರಿಯೊಂದಕ್ಕೆ ನಿಂಬೆ-ಮೆಣಸಿನಕಾಯಿಗಳನ್ನು (Lemon-Chilli) ಕಟ್ಟಿ ತೋರಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕೆ ಮಾಡಿದ್ದಾರೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿರುವುದಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎಂದು ರೈ ಆರೋಪಿಸಿದ್ದಾರೆ.
ಅಜಯ್ ರೈ ಹೇಳಿದ್ದೇನು?
ಇಂದು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಇದರಿಂದ ದೇಶ ತುಂಬಾ ತೊಂದರೆಗೀಡಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಮ್ಮ ದೇಶದ 26 ಮಂದಿ ಅಮಾಯಕರು ಹುತಾತ್ಮರಾಗಿದ್ದಾರೆ.