ಆಟ

India Pakistan War: ‘ಸಿದ್ದರಾಮಯ್ಯ ನನ್ನ ಸಿಎಂ ಅಲ್ಲ, ನನಗಂತೂ ಯುದ್ಧ ಬೇಕೇ ಬೇಕು’; ಚಕ್ರವರ್ತಿ ಸೂಲಿಬೆಲೆಯಿಂದ ಪ್ರತಿಕಾರದ ಮಾತು

ದೇಶದಲ್ಲಿ ಇದೀಗ ಯುದ್ಧದ ಕಾರ್ಮೋಡ ಆವರಿಸಿದೆ. ಈ ನಡುವೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಂತಿಯ ಮಂತ್ರ ಜಪಿಸುವ ಮೂಲಕ ರಾಜ್ಯದ ಜನರ ಆಕ್ರೋಶಕ್ಕೆ ಕಾರಣರಾಗಿದ್ದರು. ನಿನ್ನೆ ಅವರು ತಮ್ಮ ಹೇಳಿಕೆಬಗ್ಗೆ ಸ್ಪಷ್ಟನೆ ನೀಡಿ, ತಾವು ಆ ರೀತಿ ಹೇಳಿಲ್ಲ ಎಂದು ಹೇಳಿದ್ದಾರೆ

ಶಿವಮೊಗ್ಗ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ಭಯೋತ್ಪಾದಕರು ನಡೆಸಿದ ದಾಳಿಗೆ ಇಡೀ ಭಾರತ ಬೆಚ್ಚಿಬಿದ್ದಿದೆ. ಉಗ್ರರ ಬೇರನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ಸಮಸ್ತ ಭಾರತೀಯರು ಅವುಡುಗಚ್ಚಿ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಕೇಂದ್ರದ ಘಟಾಘಟಿ ನಾಯಕರು ಪ್ರತಿಕಾರದ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಯುದ್ಧದ ಕಾರ್ಮೋಡ ಆವರಿಸಿದೆ. ಆದರೆ ಈ ನಡುವೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಂತಿಯ ಮಂತ್ರ ಜಪಿಸುವ ಮೂಲಕ ರಾಜ್ಯದ ಜನರ ಆಕ್ರೋಶಕ್ಕೆ ಕಾರಣರಾಗಿದ್ದರು. ಇದೀಗ ಅವರು ಆ ಬಗ್ಗೆ ಸ್ಪಷ್ಟನೆ ನೀಡಿ, ತಾವು ಆ ರೀತಿ ಹೇಳಿಲ್ಲ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಯುದ್ಧ ಬೇಡ ಎಂಬ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಹಿಂದೂ ಪರ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಅವರು ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ನನ್ನ ಮುಖ್ಯಮಂತ್ರಿ ಅಲ್ಲ. ನಾನು ಅವರನ್ನು ನನ್ನ ಸಿಎಂ ಎಂದು ಒಪ್ಪಿಕೊಳ್ಳುವುದಿಲ್ಲ. ರಾಷ್ಟ್ರದ ವಿಚಾರ ಬಂದಾಗ ಯಾರು ತೆವಳಿಕೊಂಡು ಹೋಗುತ್ತಾರೋ ಅವರು ನನ್ನ ಸಿಎಂ ಅಲ್ಲ. ಒಂದು ತರ ಮನಮೋಹನ್ ಸಿಂಗ್ ಅವರ ಮುಂದುವರೆದ ಭಾಗವನ್ನು ನಡೆಸಿಕೊಂಡು ಹೋಗಲು ಅವರು ಭಾವಿಸಿದ್ದಾರೆ. ಪ್ರಧಾನಿ ಮೋದಿಯವರು ಭಾರತದ ಒಬ್ಬನಿಗೂ ನೋವಾದರೆ ಪ್ರತಿಕಾರ ತೆಗೆದುಕೊಳ್ಳುವಂತವರು ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!