ಉನ್ನತ ಸುದ್ದಿ
Trending
ರಸ್ತೆ ಅಪಘಾತ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು
ರಾಯಚೂರ :- ಮಾನ್ವಿ ತಾಲೂಕಿನ ಬೊಮ್ಮನಾಳ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ ಟಿಪ್ಪರ್ ಸವಾರ ದ್ವಿಚಕ್ರ ವಾಹನ ಗುದ್ದಿ ನಿಲ್ಲಿಸಿದಂತೆ ಹಾಗೆ ಹೊರಟು ಹೋಗಿದ್ದಾನೆ ಎಂದು ತಿಳಿದು ಬಂದಿದೆ ದ್ವಿಚಕ್ರ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬೊಮ್ಮನಾಳ ನಿಂದಾ ಮಾನ್ವಿಕಡೆ ಬೈಕ್ ಮೇಲೆ ಹೊರಟಿದ್ದ ದಂಪತಿ. ಹಿಂಬದಿ ಇಂದ ಟಿಪ್ಪರ್ ಚಾಲಕ ಅತಿ ವೇಗವಾಗಿ ಟು ವೀಲರ್ ಬೈಕ್ ಗೆ ಗುದ್ದಿದ ರಭಸಕೆ ಟೂ ವೀಲರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಪತ್ನಿಗೆ ಗಂಭೀರ ಗಾಯಗಳಾಗಿವೆ ಚಿಕಿತ್ಸೆಗಾಗಿ ಮಾನ್ವಿ ಸರಕಾರಿ ಆಸ್ಪತ್ರೆ ದಾಖಲಿಸಿದ್ದಾರೆ
ಮೃತಪಟ್ಟ ಪಟ್ಟ ವ್ಯಕ್ತಿ ನಾಗಪ್ಪ ತಂದೆ ಗಿರಿಯಪ್ಪ ಬೋವಿ ಬೊಮ್ಮನಾಳ
ವಯಸ್ಸು 52 ಎಂದು ತಿಳಿದುಬಂದಿದೆ ಸ್ಥಳಕ್ಕೆ . ಮಾನ್ವಿ ಪಿ ಐ ಸೋಮಶೇಖರ್ ಕೆಂಚ ರೆಡ್ಡಿ ತಕ್ಷಣವೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



