ಉನ್ನತ ಸುದ್ದಿ
Trending
ಕೆರೆಗೆ ಬಿದ್ದು ಅವಳಿ ಮಕ್ಕಳು ಸಾವು ಕುಂದಗೋಳ: ಆಟ ಆಡಲು ಹೋದ ೩ ವರ್ಷ ವಯಸ್ಸಿನ ಅವಳಿ ಮಕ್ಕಳು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿಂದು ಬೆಳಿಗ್ಗೆ ಸಂಭವಿಸಿದೆ.
ಗ್ರಾಮದ ಮುದಸ್ಸಿರ್ ಶರೀಫಸಾಬ ಚಂದುಖಾನವರ ಹಾಗೂ ಮುಜಮ್ಮಿಲ್ ಶರೀಫಸಾಬ ಚಂದುಖಾನವರ ಎಂಬ ಅವಳಿ ಮಕ್ಕಳೇ ಮೃತಪಟ್ಟ ನೃತ ದುರ್ದೈವಿಯಾಗಿದ್ದಾರೆ.

ಮಕ್ಕಳಿಗೆ ತಂದೆ ಶರೀಫಸಾಬ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದು, ತಾಯಿ ಮಕ್ಕಳಿಗೆ ಊಟ ಮಾಡಿಸಿ ಕೆಲಸಕ್ಕೆ ಹೋದಾಗ ಈ ದುರ್ಘಟಣೆ ಸಂಭವಿಸಿದೆ.
ಮಕ್ಕಳ ಮನೆ ಕೆರೆಯ ದಂಡೆ ಮೇಲಿರುವುದರಿಂದ ಈ ದುರಂತ ನಡೆದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ತಹಶೀಲ್ದಾರ ರಾಜು ಮಾವರಕರ, ಸಿಪಿಐ ಶಿವಾನಂದ ಅಂಬಿಗೇರ, ತಾ.ಪಂ. ಇಒ ಜಗದೀಶ ಕಮ್ಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




