*ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮಹಾಪೌರರಾಗಿ ಜ್ಯೋತಿ ಪಾಟೀಲ ಹಾಗೂ ಉಪಮಹಾಪೌರರಾಗಿ ಸಂತೋಷ ಚವ್ಹಾಣ ಆಯ್ಕೆ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮಹಾಪೌರರಾಗಿ 19ನೇ ವಾರ್ಡ್ ಸದಸ್ಯರಾದ ಜ್ಯೋತಿ ಪಾಟೀಲ ಅವರು ಅತಿ ಹೆಚ್ಚು (47) ಮತಗಳನ್ನು ಪಡೆದು ಆಯ್ಕೆಯಾದರು.

ಪಾಲಿಕೆಯ 49ನೇ ವಾರ್ಡ್ ಸದಸ್ಯೆಯರಾದ ಸಂತೋಷ ಚವ್ಹಾಣ ಅವರು ಅತಿ ಹೆಚ್ಚು (47) ಮತಗಳನ್ನು ಪಡೆದು ಉಪ ಮಹಾಪೌರರಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧ್ಯಕ್ಷಾಧಿಕಾರಿಯಾಗಿದ್ದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ಅವರು ಪ್ರಕಟಿಸಿದರು.
ಮಹಾಪೌರ ಸ್ಥಾನಕ್ಕೆ ಮಹಾನಗರ ಪಾಲಿಕೆಯ 59ನೇ ವಾರ್ಡ್ ಸದಸ್ಯರಾದ ಸುವರ್ಣ ಕಲಕುಂಟ್ಲ ಹಾಗೂ 76 ನೇ ವಾರ್ಡ ಸದಸ್ಯರಾದ ವಹೀದಾ ಖಾನಂ ಅಲ್ಲಾಭಕ್ಷ ಕಿತ್ತೂರು ಅವರು ಸ್ಪರ್ಧಿಸಿದ್ದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24 ನೇ ಅವಧಿಗೆ ಉಪಮಹಾಪೌರರಾಗಿ ಪಾಲಿಕೆಯ 49ನೇ ವಾರ್ಡ್ ಸದಸ್ಯೆಯರಾದ ಸಂತೋಷ ಚವ್ಹಾಣ ಅವರು ಅತಿ ಹೆಚ್ಚು (47) ಮತಗಳನ್ನು ಪಡೆಯುವ ಮೂಲಕ ಆಯ್ಕೆ ಆಗಿದ್ದಾರೆ ಎಂದು ಅವರು ತಿಳಿಸಿದರು.
ಉಪಮಹಾಪೌರ ಸ್ಥಾನಕ್ಕೆ ಮಹಾನಗರ ಪಾಲಿಕೆಯ 14ನೇ ವಾರ್ಡ್ ಸದಸ್ಯರಾದ ಶಂಭುಗೌಡ ರುದ್ರಗೌಡ ಸಾಲಮನಿ ಅವರು ಸ್ಪರ್ಧೆ ಮಾಡಿದ್ದರು.
ಮಹಾಪೌರ ಮತ್ತು ಉಪ ಮಹಾಪೌರ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಗೆ ಪಾಲಿಕೆ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ತು ಸದಸ್ಯರು ಸೇರಿ ಒಟ್ಟು 90 ಜನ ಮತದಾರರು ಇದ್ದು, ಇಂದಿನ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಯಲ್ಲಿ 87 ಜನರು ಪಾಲ್ಗೊಂಡಿದ್ದರು. ಮೂರು ಜನ ಸದಸ್ಯರು ಗೈರು ಹಾಜರಾಗಿದ್ದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಎಸ್.ಎಸ್.ಬಿರಾದಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ ಅವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.