ಉನ್ನತ ಸುದ್ದಿ
Trending

*ಹುಬ್ಬಳ್ಳಿಯ ರಾಜ್ಯ ಸಮಾಚಾರ ಕೇಂದ್ರಕ್ಕೆ ಪತ್ರಕರ್ತರ ವಾಹನ ಹಸ್ತಾಂತರ*

ಹುಬ್ಬಳ್ಳಿ :- ಕೇಂದ್ರ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ್ ಜೋಶಿ‌ ಅವರ ಪ್ರಸ್ತಾವನೆ ಮೇರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹುಬ್ಬಳ್ಳಿಯ ರಾಜ್ಯ ಸಮಾಚಾರ ಕೇಂದ್ರಕ್ಕೆ ಟಾಟಾ ಮಾಣಿಕಭಾಗ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸಿ.ಎಸ್‌‌.ಆರ್. ಅನುದಾನದಲ್ಲಿ ಕೊಡ ಮಾಡಲಾಗಿರುವ 32 ಆಸನಗಳ ಪತ್ರಕರ್ತರ ವಾಹನವನ್ನು ಇಂದು ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿರುವ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ವಾರ್ತಾ ಇಲಾಖೆಗೆ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮಾತನಾಡಿ, ಬಹಳ ದಿನಗಳಿಂದ ಹುಬ್ಬಳ್ಳಿಯ ವಾರ್ತಾ ಇಲಾಖೆಗೆ ಹೊಸ ಪತ್ರಕರ್ತರ ವಾಹನ ಬೇಕು ಎಂದು ಪತ್ರಕರ್ತರು ಈ ಹಿಂದೆ ಮನವಿ ಮಾಡಿದ್ದರು. ಈಗ ಇರುವ ವಾಹನ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಪದೇ ಪದೇ ಬಂದ್ ಆಗುತ್ತಿತ್ತು. ಇದರಿಂದ ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಪತ್ರಕರ್ತರು ತೆರಳುವ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಟಾಟಾ ಮೋಟರ್ಸ್ ಕಂಪನಿ ಅವರಿಗೆ ಈ ವಿಷಯ ಮನವರಿಕೆ ಮಾಡಿಕೊಡಲಾಗಿತ್ತು. ಅದರಂತೆ ಇಂದು ಹೊಸ ಪತ್ರಕರ್ತರ ವಾಹನವನ್ನು ವಾರ್ತಾ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಜಿಲ್ಲಾಧಕಾರಿಗಳ ಮುತುವರ್ಜಿಯಿಂದ ವಾಹನ ಇಲಾಖೆಗೆ ಸೇರ್ಪಡೆ ಆಗುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್.ಪಾಟೀಲ, ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಮಾಣಿಕ್‌‌ಬಾಗ್ ಅಟೋಮೋಬೈಲ್ಸ್ ಪ್ರೈವೇಟ್ ಲಿಮಿಟೆಡ್‌‌ನ ನಿರ್ದೇಶಕರಾದ ಶರಂಗ ಶಾ, ಟಾಟಾ‌ ಮೋಟರ್ಸ್ ಬಾಡಿ ಸಲ್ಯೂಷನ್ಸ ಲಿಮಿಟೆಡ್ ‌‌ನ ಪ್ಲಾಟ್ ಹೆಡ್ ವಿ.ಕೆ.ಸಿಂಗ್, ಟಾಟಾ ಮೋಟರ್ಸ್ ಹೆಚ್.ಆರ್. ಹೆಡ್ ರವಿ ಕುಲಕರ್ಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ, ಸಹಾಯಕ ವಾರ್ತಾ ಅಧಿಕಾರಿ ಡಾ.ಸುರೇಶ ಹಿರೇಮಠ, ಪತ್ರಕರ್ತರು, ಟಾಟಾ ಮೋಟರ್ಸ್ ಕಂಪನಿಯ‌ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!