ಅಪರಾಧ
Trending
ಕೊಲೆ ಯತ್ನ: ಆರು ಜನರ ಬಂಧನ
ಹುಬ್ಬಳ್ಳಿ: ನಗರದ ಕಮರೀಪೇಟೆ ಠಾಣೆಯಲ್ಲಿ ವರದಿಯಾಗಿದ್ದ ಅಪಹರಣ ಹಾಗೂ ಕೊಲೆ ಪ್ರಯತ್ನ ಪ್ರಕರಣಕ್ಕೆ ಆರು ಜನ ಆರೋಪಿಗಳನ್ನು ಕಮರಿಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಇಂದಿರಾನಗರದ ಪೃಥ್ವಿರಾಜ ಪೆದ್ದಣ್ಣ ಬೆತಾಪಲ್ಲಿ, ನವೀನ ತಿಪಾಲಪ್ಪ ತಲಪೂರ, ನಿಖಿಲ್ ಸಣ್ಣನಾಗಪ್ಪ ಕತ್ರಿಮಲ್ಲ, ಮನೋಜ ಆಚಿಜನೇಯ ಸಾಮ್ರಾಣಿ, ಯಶವಂತ ಸಿದ್ದಪ್ಪ ತಲಪೂರ ಹಾಗೂ ಪ್ರಭುಕುಮಾರ ಶೇಖರ ದೊಡಮನಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಜೂ. ೨೯ರಂದು ಬೆಳಗಿನ ಜಾವ ನಗರದ ಕೌಲಪೇಟ ಕ್ರಾಸ್ ಪಾನಶಾಪ ಹತ್ತಿರ ನಡೆದ ಕೃತ್ಯಕ್ಕೆ ಸಂಬಂಧಿಸಿದಂತೆ ಪಿರ್ಯಾದಿದಾರ ವಿನಾಯಕ ವೆಂಕಟೇಶ ಭಂಡಾರಿ ಎಂಬುವರು ನೀಡಿದ ದೂರಿನನ್ವಯ ಆರು ಜನರನ್ನು ದಸ್ತಗಿರ ಮಾಡಲಾಗಿದೆ ಎಂದು ಪೊಲೀಸ್ ಎನ್. ಶಶಿಕುಮಾರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್(ಕೆಎ೬೩, ಎಸ್ ೫೪೨೪, ಕೆಎ ೬೩, ಎಲ್ ೩೮೩೬)ಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್. ಮತ್ತಿತರ ಅಧಿಕಾರಿಗಳು ಇದ್ದರು.