ಹುಬ್ಬಳ್ಳಿ: ನಾಲ್ಕು ಜನ ಪುಡಿರೌಡಿಗಳ ಮೇಲಿನ ಗುಂಡಾ ಕಾಯ್ದೆ ಬಂಧನ ಆದೇಶ ಎತ್ತಿ ಹಿಡಿದ ನ್ಯಾಯಾಲಯ
ಹುಬ್ಬಳ್ಳಿ: ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ನಾಲ್ಕು ಜನರ ಮೇಲೆ ಗುಂಡಾ ಕಾಯ್ದೆ ಹಾಕಿದ ಪೋಲೀಸರ ಕ್ರಮಕ್ಕೆ ನ್ಯಾಯಾಲಯ ಬಂಧನದಲ್ಲಿಡಲು ಆದೇಶ ಹೊರಡೊಸಿದೆ.

ಹುಬ್ಬಳ್ಳಿ ಧಾರವಾಡದಲ್ಲಿ ಪುಡಿ ರೌಡಿಗಳು ತಮ್ಮ ಅಟ್ಟಹಾಸ ಮೆರೆಯುತ್ತಿದ್ದರು. ಅಷ್ಟೇ ಅಲ್ಲೆ ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸಾಗರ್ ಲಕ್ಕುಂಡಿ, ಲಕ್ಷ್ಮಣ್ ಬಳ್ಳಾರಿ ಅಲಿಯಾಸ್ ಗಭ್ಯಾ, ಮಂಜುನಾಥ್ ಭಂಡಾರಿ ಅಲಿಯಾಸ್ ಸೈಂಟಿಸ್ಟ್ ಮಂಜ್ಯಾ, ದಾವೂದ್ ನದಾಫ್ ಈ ನಾಲ್ಕು ರೌಡಿಶೀಟರ್ಗಳ ಮೇಲೆ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಗುಂಡಾ ಕಾಯ್ದೆ ಹಾಕಿ ನ್ಯಾಯಾಂಗ ಬಂಧನ ಒಪ್ಪಿಸಿದ್ದರು.
ಕಳೆದ ತಿಂಗಳು ಕಮಿಷನರ್ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹುಬ್ಬಳ್ಳಿ ಧಾರವಾಡ ರವರು ಗೂಂಡಾ ಕಾಯ್ದೆ 1985 ಅಡಿಯಲ್ಲಿ ಒಂದು ವರ್ಷದ ಅವಧಿವರೆಗೆ ವಿವಿಧ ಕಾರಗೃಹಗಳಲ್ಲಿ ಇಡಲು ಬಂಧನ ಆಜ್ಞೆ ಹೊರಡಿಸಿದ್ದರು. ಮಾನ್ಯ ಉಚ್ಛ ನ್ಯಾಯಾಲಯದ ಸಲಹಾ ಮಂಡಳಿಯು ರೌಡಿಶೀಟರ್ ಗಳ ವಿರುದ್ಧ ಹೊರಡಿಸಿದ್ದ ಗೂಂಡಾ ಕಾಯ್ದೆಯಡಿ ಬಂಧನ ಆದೇಶದ ವಿಚಾರಣೆಯನ್ನು ಕೈಗೊಂಡಿದ್ದು, ಒಂದು ವರ್ಷದ ಅವಧಿಯವರೆಗೆ ಬಂಧನ ಆಜ್ಞೆಯನ್ನು ಮುಂದುವರಿಸಿ ಆದೇಶ ಹೊರಡಿಸಿದೆ. ಇನ್ನು ಪೊಲೀಸ್ ಇಲಾಖೆ ರೌಡಿ, ಗುಂಡಾ ಚಟುವಟಿಕೆ ನಿಯಂತ್ರಣ ಮಾಡಲು ಹಲವು ಕ್ರಮ ಕೈಗೊಂಡಿದ್ದು 700 ಕ್ಕೂ ಅಧಿಕ ರೌಡಿಗಳ ಮೇಲೆ ಕ್ರಮ ಕೈಗೊಂಡಿದೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಹೇಳಿದರು.
ಇನ್ಮುಂದೆ ಯಾರಾದ್ರೂ ಪುಡಿರೌಡಿಗಳು ಬಾಲ ಬಿಚ್ಚಿ ಕಾನೂನು ಬಾಹಿರ ಚಟುವಟಿಕೆ ಮತ್ತು ಜನರಿಗೆ ತೊಂದ್ರೆ ಕೊಡುತ್ತಿದ್ದರೆ, ಖಾಕಿ ಏಟು ಬೀಳೋದು ಮಾತ್ರ ಗ್ಯಾರೆಂಟಿ. ಸಾರ್ವಜನಿಕರೆ ನಿಮಗೆ ಯಾರಾದ್ರೂ ತೊಂದ್ರೆ ಕೊಡುತ್ತಿದ್ದರೆ ನಿಮ್ಮ ಹತ್ತಿರವಿರುವ ಪೊಲೀಸ್ ಠಾಣೆಗೆ ದೂರು ನೀಡಿ, ತಕ್ಷಣ ಪೊಲೀಸರು ಕ್ರಮಗೈಗೊಳ್ಳುತ್ತಾರೆ.