ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಸ್ತಿಯನ್ನೇ ದೋಚಿದ ಕಾರ್ಪೊರೇಟರ್ – ಟೆಂಡರ್ ಇಲ್ಲದೆಯೇ ಲಕ್ಷಾಂತರ ಮೌಲ್ಯದ ವಸ್ತುಗಳ ಮಾರಾಟ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ನಂಬರ್ 71ರಲ್ಲಿ ಬರುವ ಹಳೇ ಹುಬ್ಬಳ್ಳಿಯ ಪಡದಯ್ಯನ ಹಕ್ಕಲದಲ್ಲಿ, ಸುಮಾರು ವರ್ಷಗಳಿಂದ ಇದ್ದ ಕಸಾಯಿ ಖಾನೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಹಳೆ ಬಿಲ್ಡಿಂಗ್‌ದಲ್ಲಿನ ಕಬ್ಬಿಣ ಮತ್ತು ಬೇರೆ ಬೇರೆ ವಸ್ತುಗಳನ್ನು ಒಂದೆಡೆ ಇಡಲಾಗಿತ್ತು. ಆದ್ರೆ ನಿನ್ನೆ ದಿನದಂದು ಏಕಾಏಕಿ ಬಂದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ, ಆ ಕಬ್ಬಿಣದ ವಸ್ತುಗಳನ್ನು ಟ್ರ್ಯಾಕ್ಟರ್ ಮೂಲಕ ಹಾಕಿಕೊಂಡು ಹೋಗಿದ್ದಾರೆ. ಇದರ ಹಿಂದೆ ಅದೇ ಭಾಗದ ಕಾರ್ಪೊರೇಟರ್ ನಜೀರ್ ಹೊನ್ಯಾಳ ಕೈವಾಡವಿದೆ ಎಂದು ಆರೋಪ ಕೇಳಿ ಬಂದಿದೆ.

ಪ್ರಾಣಿಗಳನ್ನು ವಧೆ ಮಾಡಲು ಇರುವ ಒಂದೇ ಒಂದು ಕಸಾಯಿ ಖಾನೆ ಇದಾಗಿತ್ತು. ಅದು ಹಾಳಾಗಿದ್ದರಿಂದ ಪಾಲಿಕೆ ವತಿಯಿಂದ ರೆನೋವೇಶನ್ ಮಾಡಲಾಗಿತ್ತು. ಹಳೆಯ ಕಬ್ಬಿಣದ ವಸ್ತುಗಳನ್ನು ಒಂದಡೆ ಇಡಲಾಗಿತ್ತು. ಈ ಎಲ್ಲದಕ್ಕೂ ಮಹಾನಗರ ಪಾಲಿಕೆ ಮಾಲೀಕತ್ವ ಹೊಂದಿರುತ್ತದೆ. ಅಂತಹ ವಸ್ತುಗಳಿಗೆ ಟೆಂಡರ್ ಕರೆಯುತ್ತಾರೆ. ಆದ್ರೆ ಇಲ್ಲಿ ಇದು ಯಾವುದು ಇಲ್ಲದೇ ಕಾರ್ಪೊರೇಟರ್ ನಜೀರ್ ಹೊನ್ಯಾಳ ತಮ್ಮ ಕಾರ್ಯಕರ್ತರು ಕರೆಯಿಸಿ 10 ರಿಂದ15 ಲಕ್ಷ ರೂಪಾಯಿ ಬೆಲೆ ಬಾಳುವ ಕಬ್ಬಿಣದ ವಸ್ತುಗಳನ್ನು ಪಾಲಿಕೆಗೂ ಹೇಳದೆ ತೆಗೆದುಕೊಂಡು ಹೋಗಿದಾರೆ.
ಅದೇ ಸ್ಥಳದಲ್ಲಿ ಕಸಾಯಿ ಖಾನೆ ಡಾಕ್ಟರ್ ಕೂಡ ಇದ್ದಾರೆ. ಇವರಿಬ್ಬರೂ ಶಾಮೀಲಾಗಿ ಈ ಕೆಲಸ ಮಾಡಿದ್ದಾರೆಂದು ಸ್ಥಳೀಯರು ಮತ್ತು ಅದೇ ವಾರ್ಡಿನ ಮಾಜಿ ಕಾರ್ಪೊರೇಟರ್ ಗಣೇಶ ಟಗರಗುಂಟಿ ಆರೋಪ ಮಾಡುತ್ತಿದ್ದಾರೆ.
ಇನ್ನು ಪಾಲಿಕೆಗೆ ಸೇರಬೇಕಾದ ವಸ್ತುಗಳನ್ನು ಯಾರು ಬೇಕಾದ್ರೂ ತೆಗೆದುಕೊಂಡು ಹೋಗಬಹುದಾ..? ಈ ಕಸಾಯಿ ಖಾನೆಯಲ್ಲಾದ ಅವ್ಯವಹಾರದ ಬಗ್ಗೆ ಪಾಲಿಕೆ ಆಯುಕ್ತರು, ದೂರು ನೀಡಿ ಸೂಕ್ತ ತನಿಖೆ ಮಾಡಬೇಕು. ಕಳ್ಳರು ಯಾರು ಎಂಬುದನ್ನು ಕಂಡು ಹಿಡಿದು ಕಾನೂನು ಕ್ರಮ ಜರುಗಿಸಬೇಕಾಗಿದೆ.