ಉನ್ನತ ಸುದ್ದಿ
Trending
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಅಭಿವೃದ್ಧಿಗಾಗಿ ಧ್ವನಿ ಎತ್ತುತ್ತೇನೆ ಎಂದ ಇಮ್ರಾನ್ ಎಲಿಗಾರ
ಹುಬ್ಬಳ್ಳಿ: ಸುಮಾರು 25 ವರ್ಷಗಳ ಬಿಜೆಪಿಯವರೇ ಪಾಲಿಕೆ ಆಡಳಿ ಮಾಡುತ್ತಿದ್ದಾರೆ. ಅಭಿವೃದ್ಧಿ ಮಾತ್ರ ಶೂನ್ಯ. ಮೇಯರ್, ಉಪ ಮೇಯರ್ ಆದವರು ಕೇವಲ ಅವರ ವಾರ್ಡ್ಗಳನ್ನು ಮಾತ್ರ ಅಭಿವೃದ್ಧಿ ಮಾಡಿಕೊಳ್ಳುತ್ತಾರೆ. ಬೇರೆ ಯಾವುದಕ್ಕೂ ತಿರುಗಿ ನೋಡೋದಿಲ್ಲ. ಇನ್ಮುಂದೆ ಅವಳಿ ನಗರದ ಅಭಿವೃದ್ಧಿಗಾಗಿ ನಾನು ಧ್ವನಿ ಎತ್ತುತ್ತೇನೆ ಎಂದು ನೂತನ ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಎಲಿಗಾರ ಹೇಳಿದರು.

ಇಡೀ ಹುಬ್ಬಳ್ಳಿಯ ತುಂಬ ತಗ್ಗುಗಳು ಬಿದ್ದಿವೆ. ಅದರ ಬಗ್ಗೆ ಯಾರು ನೋಡುತ್ತಿಲ್ಲ. ಎಲ್ಲೆಂದರಲ್ಲಿ ಚರಂಡಿ ಬ್ಲಾಕ್ ಆಗುತ್ತಿವೆ. ಇಷ್ಟು ವರ್ಷಗಳ ಕಾಲ ಅವಕಾಶ ಕೊಟ್ರು ಕೂಡ ಬಿಜೆಪಿಯವರು ಅಭಿವೃದ್ಧಿ ಮಾಡಲು ವಿಫಲರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಸರ್ಕಲ್ಗಳನ್ನು ಅಭಿವೃದ್ಧಿ ಮಾಡುತ್ತಿಲ್ಲ. ಇನ್ಮುಂದೆ ಹೀಗೆ ಮಾಡುತ್ತಿದ್ದರೆ ನಾನು ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡಲು ಸಿದ್ದರಿದ್ದೇವೆ. ಎಲ್ಲರು ಕೈ ಜೋಡಿಸಿ ಕೆಲಸ ಮಾಡಿದ್ರೆ ಸಂತಸ ವ್ಯಕ್ತಪಡಿಸುತ್ತೇನೆ ಎಂದರು.