ಉನ್ನತ ಸುದ್ದಿ
Trending
ಸ್ಟಿಲ್ ಇಂಡಿಯಾದ ಶೋರೂಂ ಉದ್ಘಾಟನೆ
ಹುಬ್ಬಳ್ಳಿ: ನಗರದ ನಿಲಿಜನ್ ರಸ್ತೆಯ ಮಡಿಮನ್ ಕಾಂಪ್ಲೆಕ್ಸ್‌ನಲ್ಲಿ ತೆರೆಯಲಾದ ಹೊರಾಂಗಣ ವಿದ್ಯುತ್ ಉಪಕರಣಗಳು ಮತ್ತು ಸೊಲ್ಯೂಷನ್ಸ್ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸ್ಟಿಲ್ ಇಂಡಿಯಾ, ತನ್ನ ನೂತನ ಎಲ್‌ಜಿ ಎಂಟರ್‌ಪ್ರೈಸಸ್‌ನ ಉದ್ಘಾಟನೆಯನ್ನು ಏಷ್ಯಾ ಖಂಡದ ಮಾರಾಟ ನಿರ್ದೇಶಕ ವೋಲ್ಕರ್ ಬುಚೋಲ್ಜ್, ಭಾರತದ ವ್ಯವಸ್ಥಾಪಕ ನಿರ್ದೇಶಕ ಪರಿಂದ್ ಪ್ರಭು ದೇಸಾಯಿ ಮತ್ತು ದಕ್ಷಿಣ ಪ್ರಾದೇಶಿಕ ಮುಖ್ಯಸ್ಥ ಸಂಜಯ್ ವರ್ಮಾ ನೆರವೇರಿಸಿದರು.

ಬಳಿಕ ಮಾತನಾಡಿದ ಪರಿಂದ್ ಪ್ರಭುದೇಸಾಯಿ, ಸ್ಟಿಲ್ ಯಾಂತ್ರೀಕರಣದ ಬದ್ದತೆ ಮತ್ತು ಭಾರತೀಯ ಗ್ರಾಹಕರಿಗೆ ಉದ್ಯಮದಲ್ಲಿ ಅತ್ಯುತ್ತಮ ಉತ್ಪನ್ನಗಳನ್ನು ಒದಗಿಸುತ್ತಿದೆ. ಇದಲ್ಲದೇ ಗುಣಮಟ್ಟ, ನಾವಿತ್ಯತೆ ಮತ್ತು ಗ್ರಾಹಕರಿಗೆ ತೃಪ್ತಿಗೆ ನಮ್ಮ ಸಂಸ್ಥೆ ಆದ್ಯತೆ ನೀಡಲಿದೆ ಎಂದರು.
ಇನ್ನು ವೃತ್ತಿಪರರು ಮತ್ತು ಗ್ರಾಹಕರು ಇಬ್ಬರಿಗೂ ಹೊರಾಂಗಣ ಕಾರ್ಯಗಳಿಗಾಗಿ ವಿಶ್ವಾಸಾರ್ಹ, ಉನ್ನತ ಕಾರ್ಯಕ್ಷಮತೆಯ ಪರಿಕರಗಳೊಂದಿಗೆ ಸಹಾಯ ಮಾಡಲಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯನ್ನು ಅತ್ಯಾಧುನಿಕ ಪರಿಹಾರಗಳೊಂದಿಗೆ ಸಬಲೀಕರಣಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ನೂತನ ಶೋರೂಂನಲ್ಲಿ ಚೈನ್ಸಾಗಳು, ಬ್ಲೋವರ್‌ಗಳು, ಟ್ರಿಮ್ಮರ್‌ಗಳು ಮತ್ತು ಇತರ ವಿದ್ಯುತ್ ಉಪಕರಣಗಳು ಸೇರಿದಂತೆ ಅದರ ಐಕಾನಿಕ್ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ನೀಡುತ್ತಿದೆ.
ಈ ಸಂದರ್ಭದಲ್ಲಿ ಎಲ್.ಜಿ.ಎಂಟರ್‌ಪ್ರೈಸಸ್ ಮಾಲೀಕ ನವೀನ್ ಎಸ್.ಎಲ್, ಕರ್ನಾಟಕ ಸ್ಟೇಟ್ ಹೆಡ್ ಶರತ್ ಶೆಟ್ಟಿ, ಉತ್ತರ ಕರ್ನಾಟಕ ಹೆಡ್ ಶರಣ ಬಂಡಾರಿಮಠ ಮತ್ತು ಇತರ ಸಿಬ್ಬಂದಿ ಇದ್ದರು.