ಕರ್ನಾಟಕದ 10 ‘ಗುರುತಿಸಲ್ಪಡದ’ ರಾಜಕೀಯ ಪಕ್ಷಗಳಿಗೆ ‘ಅಮಾನ್ಯತೆ’ ಭೀತಿ! ಲಿಸ್ಟ್ ನಲ್ಲಿದೆಯಾ ಉಪೇಂದ್ರರ ‘ಪ್ರಜಾಕೀಯ’?
ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಾಯಿಸಲ್ಪಟ್ಟಿದ್ದರೂ ಸತತ ಆರು ವರ್ಷಗಳಲ್ಲಿ ಯಾವುದೇ ಚುನಾವಣೆಗಳಲ್ಲಿ ಸ್ಪರ್ದಿಸದೇ ಇರುವಂಥ ವಿವಿಧ ರಾಜ್ಯಗಳ ಸಣ್ಣಪುಟ್ಟ ರಾಜಕೀಯ ಪಕ್ಷಗಳನ್ನು ನನ್ನ ನೋಂದಣಿ ಪಟ್ಟಿಯಿಂದ ಕೈಬಿಡಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಅಂದರೆ, ಆ ಪಕ್ಷಗಳು ಚುನಾವಣಾ ಆಯೋಗದ ಮಾನ್ಯತೆ ಪಡೆಯ ಪಕ್ಷಗಳಾಗುತ್ತವೆ. ಆ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸುವುದು ಹಾಗೂ ಆದಾಯ ತೆರಿಗೆಯಿಂದ ವಿನಾಯ್ತಿ ಪಡೆಯುವಂಥ ಅವಕಾಶಗಳಿಂದ ವಂಚಿತವಾಗುತ್ತವೆ.

ನವದೆಹಲಿ: ಕರ್ನಾಟಕದ 10 ಪಕ್ಷಗಳು ಸೇರಿದಂತೆ ದೇಶದ ಒಟ್ಟು 334 ‘ನೋಂದಾಯಿಲ್ಪಟ್ಟಿದ್ದರೂ ಗುರುತಿಸಲ್ಪಡದ ಪಕ್ಷಗಳನ್ನು (ಆರ್ ಪಿಪಿ) ತನ್ನ ಪಟ್ಟಿಯಿಂದ ಕೈಬಿಡಲು ಕೇಂದ್ರ ಚುನಾವಣಾ ಆಯೋಗದಲ್ಲಿ (ಇಸಿಐ) ನಿರ್ಧರಿಸಿದೆ. ಇಸಿಐ ಪಟ್ಟಿಯಿಂದ ಹೊರಹಾಕಲ್ಪಟ್ಟರೆ ಅವು ಇಸಿಐನ ಮಾನ್ಯತೆ ಕಳೆದುಕೊಂಡಂತೆ. ಆಗ ಅವುಗಳಿಗೆ ವಿವಿಧ ಸಂಘ-ಸಂಸ್ಥೆಗಳಿಂದ, ವ್ಯಕ್ತಿಗಳಿಂದ ದೇಣಿಗೆ ಸಂಗ್ರಹಿಸುವುದು ಸಾಧ್ಯವಿಲ್ಲ. ಹಾಗೆ ಸಂಗ್ರಹಿಸಿದ ದೇಣಿಗೆಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ವಿನಾಯ್ತಿಯನ್ನೂ ಕೋರುವ ಹಾಗಿಲ್ಲ.
1951ರ ಜನಪ್ರತಿನಿಧಿ ಕಾಯ್ದೆಯಡಿ ಚುನಾವಣಾ ಆಯೋಗದಲ್ಲಿ ನೋಂದಾಯಿಸಲ್ಪಟ್ಟಿರುವ ಯಾವುದೇ ರಾಜಕೀಯ ಪಕ್ಷವು ಆರು ವರ್ಷಗಳಲ್ಲಿ ಒಂದಾದರೂ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಿ ಗುರುತಿಸಿಕೊಳ್ಳಬೇಕು. ಆ ಹಿನ್ನೆಲೆಯಲ್ಲಿ 2019ರಿಂದೀಚೆಗೆ 6 ವರ್ಷಗಳಲ್ಲಿ ಯಾವುದಾದರೊಂದು ಸಾರ್ವತ್ರಿಕ ಚುನಾವಣೆಯಲ್ಲಿ ನಿಲ್ಲಿರುವ ಪಕ್ಷಗಳನ್ನು ನೋಂದಾಯಿಸಿದರೂ ಗುರುತಿಸಿಕೊಳ್ಳದ ಪಕ್ಷಗಳೆಂದು (ಆರ್ ಯುಪಿಪಿ) 2,800ಕ್ಕೂ ಹೆಚ್ಚು ಪಕ್ಷಗಳನ್ನು ಚುನಾವಣಾ ಆಯೋಗ ಪಟ್ಟಿ ಮಾಡಿದೆ. ಆ ಪಟ್ಟಿಯಲ್ಲಿ ಸದ್ಯಕ್ಕೆ 334 ಪಕ್ಷಗಳನ್ನು ಮಾತ್ರ ನಿಷೇಧಿಸಲು ನಿರ್ಧರಿಸಲಾಗಿದೆ.
ಆ.11ರಂದು ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕದ 10 ಪಾರ್ಟಿಗಳನ್ನು ತನ್ನ ಪಟ್ಟಿಯಿಂದ ಕೈಬಿಡಲು ನಿರ್ಧರಿಸಿರುವುದಾಗಿ ಆಯೋಗ ಹೇಳಿದೆ. ಕರ್ನಾಟಕದಲ್ಲಿ ಒಟ್ಟು 12 ಪಾರ್ಟಿಗಳು (ಆರ್ ಯುಪಿಪಿ) ಎಂದು ಗುರುತಿಸಲಾಗಿದೆ. ಅವುಗಳ ಪಟ್ಟಿ ಹೀಗಿದೆ:
- ಅಂಬೇಡ್ಕರ್ ಜನತಾ ಪಾರ್ಟಿ
- ಭಾರತೀಯ ಪ್ರಜಾ ಪಕ್ಷ
- ಜನ ಸ್ವರಾಜ್ಯ ಪಕ್ಷ
- ಕಲ್ಯಾಣ ಕ್ರಾಂತಿ ಪಾರ್ಟಿ
- ಕರ್ನಾಟಕ ಪ್ರಜಾ ವಿಕಾಸ ಪಕ್ಷ
- ಕರ್ನಾಟಕ ಸ್ವರಾಜ್ಯ ಪಕ್ಷ
- ಮಹಿಳಾ ಪ್ರಧಾನ ಪಕ್ಷ
- ರಕ್ಷಕ ಸೇನೆ
- ಪ್ರಜಾ ರೈತ ರಾಜ್ಯ ಪಕ್ಷ
- ನಮ್ಮ ಕಾಂಗ್ರೆಸ್
- ಸಾಮಾನ್ಯ ಜನತಾ ಪಾರ್ಟಿ (ಲೋಕತಾಂತ್ರಿಕ)
- ವಿಚಾರ ಜಾಗೃತಿ ಕಾಂಗ್ರೆಸ್ ಪಕ್ಷ
ಉಪೇಂದ್ರರ ಪಕ್ಷದ ಕಥೆಯೇನು?
ಚಿತ್ರನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ಕಥೆಯೇನು ಎಂಬ ಪ್ರಶ್ನೆ ಬರುತ್ತದೆ. ವಿಕಿಪೀಡಿಯಾ ಪ್ರಕಾರ, ಅದು ಸಹ ನೋಂದಾಯಿಸಲ್ಪಟ್ಟ ಗುರುತಿಸಲ್ಪಡದ ಪಕ್ಷ. ಆದರೆ, ಅವರ ಪಕ್ಷದ ಹೆಸರು ಚುನಾವಣಾ ಆಯೋಗ ಪಟ್ಟಿ ಮಾಡಿರುವ ಆರ್ ಯುಪಿಪಿ ಪಟ್ಟಿಯಲ್ಲಿಲ್ಲ. ಹಾಗಾಗಿ, ಆ ಪಕ್ಷಕ್ಕೆ ನಿಷೇಧದ ಭೀತಿಯಿಲ್ಲ.




