ಸಹಕಾರಿ ಸಂಘದ ಅಧ್ಯಕ್ಷರು, ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಗೆಳೆಯರ ಬಳಗದಿಂದ ಸನ್ಮಾನ
ಸಹಕಾರಿ ಸಂಘದ ಅಧ್ಯಕ್ಷರು, ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಗೆಳೆಯರ ಬಳಗದಿಂದ ಸನ್ಮಾನ

ಸಹಕಾರಿ ಸಂಘದ ಅಧ್ಯಕ್ಷರು, ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಗೆಳೆಯರ ಬಳಗದಿಂದ ಸನ್ಮಾನ
ಹುಬ್ಬಳ್ಳಿ:ದಿ 06, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಸಂಘ, ವ್ಯಾಪಾರಸ್ಥರ ಸಂಘಕ್ಕೆ ಮತ್ತು ವಿವಿಧ ಸಮುದಾಯಗಳಿಗೆ ನಡೆದ ಚುನಾವಣೆಯಲ್ಲಿ ನೂತನವಾಗಿ ಚುನಾಯಿತಗೊಂಡ ಅಧ್ಯಕ್ಷರುಗಳಿಗೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಸಾಮಾಜಿಕ ಹೋರಾಟಗಾರ ಹಾಗೂ ಬಸವ ಶ್ರೀ ಪ್ರಶಸ್ತಿ ಪುರಸ್ಕೃತ ರಾಜಶೇಖರ್ ಮೆಣಸಿನಕಾಯಿರವರ ನೇತೃತ್ವದಲ್ಲಿ ದಿ 06 ರಂದು ಸಂಜೆ ನಗರದ ಮೂರು ಸಾವಿರಮಠದಲ್ಲಿ ಗೆಳೆಯರ ಬಳಗದಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮಠದ ಪೂಜ್ಯರಾದ ಶ್ರೀ ಜಗದ್ಗುರು ಗುರುಸಿದ್ಧರಾಜ ಯೋಗೇಂದ್ರ ಮಹಾಸ್ವಾಮಿಗಳು ವಹಿಸಿದ್ದರು, ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ ಶ್ರೀ ರಾಜಕಿರಣ ಮೆಣಸಿನಕಾಯಿ, ಮಹೇಶ್ವರ್ ಕೋ ಆಪರೇಟಿವ ಕ್ರೆಡಿಟ್ ಸೊಸೈಟಿಯ, ಲಿ ಅಧ್ಯಕ್ಷರಾದ ಶ್ರೀ ಬಂಗಾರೇಶ ಹಿರೇಮಠ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಗೋಪಾಲ್ ಕುಲಕರ್ಣಿ, ರಾಜ್ಯ ಕುರುಹಿನಶೆಟ್ಟಿ ಕೇಂದ್ರ ಸಂಘ, ಬೆಂಗಳೂರ ಉಪಾಧ್ಯಕ್ಷರಾದ ಶ್ರೀ ಎಂ ಪಿ ಶಿವಕುಮಾರ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪಡೆದ ನಗರದ ಗಣ್ಯ ವ್ಯಾಪಾರಸ್ಥರಾದ ಶ್ರೀ ಪ್ರಕಾಶ್ ಬಾಫನಾರವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರುಗಳಾದ ರಾಜಶೇಖರ್ ಮೆಣಸಿನಕಾಯಿ, ಜಿತೇಂದ್ರ ಪಾಲ್ಗೂಟ ಜೈನ ಬಾಬಾಜಾನ ಮುಧೋಳ ಸುರೇಶ್ ಸವಣೂರ ಸಂಜಯ ಭಂಡಾರಿ ಜೀತುಭೈ ಚಾಚಡ್ ಕುಮಾರ ಕುಂದನಹಳ್ಳಿ ಅಳ್ಳಾವರ ಪಟ್ಟಣ ಪಂಚಾಯತಿ ಸದಸ್ಯ ತಮಿಮ ತೇರ್ಗಾವ್ ಸಾಜಿದ್ ಅವರಾದಿ ವಿನಾಯಕ್ ಮಾಳವದಕರ್ ಪಿ ಸಿ ಕಮ್ಮಾರ,ಅಹಮದ ಭಾಗೇವಾಡಿ ಸಿದ್ದಣ್ಣ ಸಿದ್ದೇಶ್ವರ ಸಂತೋಷ ಬ್ರಿಗೇನಜ, ಡಸ್ಟರ ಶಾಂತಿನಾಥ ಘೋಷಾಲೆಯ ಅಧ್ಯಕ್ಷ ಭರತ ಭಂಡಾರಿ ರವಿ ಹೊಸೂರ್ ಸೂರ್ಯಕಾಂತ ಘೋಡಕೆ ವಿತುಲ ತಬಿಬ್ ಸೇರಿದಂತೆ ವಿವಿಧ ಸಮಾಜದ ನೂರಾರು ಬಂದುಗಳು ಆಗಮಿಸಿದ್ದರು,ಮೊದಲಿಗೆ ಸ್ವಾಗತ ಹಾಗೂ ಪ್ರಸ್ತಾವಿಕವಾಗಿ ಶಿವಾನಂದ ಜವಳಿ ಮಾತನಾಡಿದರು. ಕೊನೆಯಲ್ಲಿ ಕುಮಾರ ಕುಂದನಹಳ್ಳಿ ವಂದಿಸಿದರು.




