ಹುಡಾ ಅಧ್ಯಕ್ಷ ಪಟ್ಟಕ್ಕೆ ಲಾಬಿ ಶುರು; ರೇಸ್‌ನಲ್ಲಿ ಇರೋದ್ಯಾರು, ಯಾರಿಗೆ ಮಣೆ ಸಾಧ್ಯತೆ? ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅವಧಿ ಫೆಬ್ರವರಿ 28ಕ್ಕೆ ಅಂತ್ಯಗೊಳ್ಳುತ್ತಿದೆ. ಈಗಾಗಲೇ ಹೊಸ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್‌ನಲ್ಲಿ ಲಾಬಿ ತೀವ್ರಗೊಂಡಿದೆ. ಜಾತಿ, ಸಮುದಾಯ ಲೆಕ್ಕಾಚಾರದೊಂದಿಗೆ ಧಾರವಾಡಕ್ಕೆ ಈ ಬಾರಿ ಅವಕಾಶ ನೀಡಬೇಕೆಂಬ ಒತ್ತಡವೂ ಹೆಚ್ಚಾಗಿದೆ. ಹಲವು ಆಕಾಂಕ್ಷಿಗಳು ತಮ್ಮ ಹೆಸರುಗಳನ್ನು ಪಕ್ಷದ ವರಿಷ್ಠರ ಮುಂದಿಟ್ಟು ಕಸರತ್ತು ನಡೆಸುತ್ತಿದ್ದಾರೆ. ಜೊತೆಗೆ ಈ ಬಾರಿ ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹುಡಾ ಅಧ್ಯಕ್ಷ ಪಟ್ಟಕ್ಕೆ ಲಾಬಿ ಶುರು
ಹುಡಾ ಅಧ್ಯಕ್ಷ ಪಟ್ಟಕ್ಕೆ ಲಾಬಿ ಶುರು; ರೇಸ್‌ನಲ್ಲಿ ಇರೋದ್ಯಾರು, ಯಾರಿಗೆ ಮಣೆ ಸಾಧ್ಯತೆ?
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅವಧಿ ಫೆಬ್ರವರಿ 28ಕ್ಕೆ ಅಂತ್ಯಗೊಳ್ಳುತ್ತಿದೆ. ಈಗಾಗಲೇ ಹೊಸ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್‌ನಲ್ಲಿ ಲಾಬಿ ತೀವ್ರಗೊಂಡಿದೆ. ಜಾತಿ, ಸಮುದಾಯ ಲೆಕ್ಕಾಚಾರದೊಂದಿಗೆ ಧಾರವಾಡಕ್ಕೆ ಈ ಬಾರಿ ಅವಕಾಶ ನೀಡಬೇಕೆಂಬ ಒತ್ತಡವೂ ಹೆಚ್ಚಾಗಿದೆ. ಹಲವು ಆಕಾಂಕ್ಷಿಗಳು ತಮ್ಮ ಹೆಸರುಗಳನ್ನು ಪಕ್ಷದ ವರಿಷ್ಠರ ಮುಂದಿಟ್ಟು ಕಸರತ್ತು ನಡೆಸುತ್ತಿದ್ದಾರೆ. ಜೊತೆಗೆ ಈ ಬಾರಿ ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಧಾರವಾಡ: ಪ್ರತಿಷ್ಠಿತ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನಾಮನಿರ್ದೇಶನದ ಅಧಿಕಾರವಧಿ ಫೆಬ್ರವರಿ 28ಕ್ಕೆ ಮುಗಿಯಲಿದ್ದು, ಈ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಹಲವಾರು ಕಾಂಗ್ರೆಸ್ ಮುಖಂಡರು ಈಗಿನಿಂದಲೇ ಲಾಬಿ ಶುರು ಮಾಡಿದ್ದಾರೆ. ಜಾತಿ- ಸಮುದಾಯಗಳ ಲೆಕ್ಕಾಚಾರ ಮುಂದಿಟ್ಟುಕೊಂಡು ಪಕ್ಷದ ವರಿಷ್ಠರ ಮೇಲೆ ಪ್ರಭಾವ ಬೀರುತ್ತಿದ್ದಾರೆ.ಹಾಗೇನಾದರೂ ನಡೆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಆಪ್ತ ರಾಬರ್ಟ್ ದದ್ದಾಪುರಿ ಅವರಿಗೆ ಈ ಸ್ಥಾನ ಒಲಿಯಬಹುದು. ಏಕೆಂದರೆ ಕಳೆದ ಅವಧಿಯಲ್ಲಿಯೇ ಅವರು ಪ್ರಬಲ ಆಕಾಂಕ್ಷಿ ಆಗಿದ್ದರು. ಈ ಮಧ್ಯೆ ಡಿ.ಕೆ.ನಾಯ್ಕರ ಅವರ ಸಂಬಂಧಿಕರೂ ಆಗಿರುವ ಹು-ಧಾ ಮಹಾನಗರ ಜಿಲ್ಲಾಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ರಾಜು ಎಚ್.ಎಂ. ಹೆಸರು ಕೂಡ ಮುಂಚೂಣಿಯಲ್ಲಿದೆ. ಮಹಿಳಾ ಕೋಟಾ ಪರಿಗಣಿಸಿದರೆ ದೇವಕಿ ಯೋಗಾನಂದ ಪ್ರಬಲರಾಗಿದ್ದಾರೆ. ಕೆಲ ಹಳೇಹುಲಿಗಳೂ ಪ್ರಯತ್ನ ನಡೆಸಿವೆ ಎಂದು ಮುಖಂಡರೊಬ್ಬರು ವಿಕಕ್ಕೆ ತಿಳಿಸಿದ್ದಾರೆ.
ಪಾಲಿಕೆ ನಾಮನಿರ್ದೇಶನಕ್ಕೂ ಪೈಪೋಟಿ
ಈ ನಡುವೆ ಹು-ಧಾ ಮಹಾನಗರ ಪಾಲಿಕೆಯ 5 ನಾಮನಿರ್ದೇಶನ ಸ್ಥಾನಗಳಿಗೂ ಹಲವರು ಪೈಪೋಟಿ ನಡೆಸಿದ್ದಾರೆ. ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಶೇಖರ ಮೆಣಸಿನಕಾಯಿ ಹಾಗೂ ಗ್ರಾಮೀಣ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಜುಟ್ಟಲ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಹುಡಾ ಸೇರಿದಂತೆ ವಿವಿಧ ನಿಗಮಗಳ ಸದಸ್ಯ ಸ್ಥಾನದ ಮೇಲೂ ಕೆಲವರ ಕಣ್ಣಿದೆ. ಬ್ರಾಹ್ಮಣ ಸಮಾಜ ಅಭಿವೃದ್ಧಿ ನಿಗಮಕ್ಕೂ ಧಾರವಾಡದ ಮುಖಂಡರು ಲಾಬಿ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸುತ್ತಿವೆ.
ಹು-ಡಾ ಅಧ್ಯಕ್ಷ ಸ್ಥಾನಕ್ಕೆ ಹಲವರು ಪೈಪೋಟಿ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿಆಕಾಂಕ್ಷಿಗಳ ಸಂಖ್ಯೆ ಬಹಳ ಇದೆ. ಈ ಬಗ್ಗೆ ವರಿಷ್ಠರಿಗೆ ಹಲವರು ಅರ್ಜಿ ಹಾಕಿದ್ದಾರೆ. ಸಾಮಾಜಿಕ ನ್ಯಾಯ ಪರಿಕಲ್ಪನೆ ಅಡಿ ಈ ಸ್ಥಾನಕ್ಕೆ ಜಿಲ್ಲೆಯ ಎಲ್ಲನಾಯಕರು ಸೇರಿ ಒಬ್ಬರನ್ನು ಆಯ್ಕೆ ಮಾಡಿ ಸರಕಾರಕ್ಕೆ ಕಳುಹಿಸಲಿದ್ದಾರೆ ಎಂದು ಹು-ಡಾ ಅಧ್ಯಕ್ಷ ಶಾಕೀರ ಸನದಿ ಹೇಳಿದರು.




