ಉನ್ನತ ಸುದ್ದಿ
ಕರ್ನಾಟಕದಲ್ಲಿ ಹಾದು ಹೋಗುವ ಅತ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದಾಗಿರುವ ಹುಬ್ಬಳ್ಳಿ – ವಿಜಯಪುರ ಹೆದ್ದಾರಿಯ (NH 52) ಚಿತ್ರಣ ಶೀಘ್ರದಲ್ಲೇ ಬದಲಾಗಲಿದೆ. ಪ್ರಸ್ತುತ ಕಿರಿದಾಗಿರುವ ಈ ದ್ವಿಪಥ (2-Lane) ರಸ್ತೆಯನ್ನು ಬರೋಬ್ಬರಿ 4 ಪಥದ (4-Lane) ಹೈಟೆಕ್ ಹೆದ್ದಾರಿಯಾಗಿ ವಿಸ್ತರಿಸುವ ಬೃಹತ್ ಕಾಮಗಾರಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) 199 ಕಿ.ಮೀ ಉದ್ದದ ಈ ರಸ್ತೆಯ ಅಭಿವೃದ್ಧಿಗಾಗಿ ಇದೀಗ ‘ವಿವರವಾದ ಯೋಜನಾ ವರದಿ’ (DPR) ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದ್ದು, ಕಾಮಗಾರಿಯ ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಹೆದ್ದಾರಿ ನಿರ್ಮಾಣದಿಂದ ಉತ್ತರ ಕರ್ನಾಟಕದ ಭಾಗದಲ್ಲಿ ಆರ್ಥಿಕ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ದೊಡ್ಡ ಬೂಸ್ಟ್ ಸಿಗಲಿದೆ.NH-52 ಹೆದ್ದಾರಿ ಅಭಿವೃದ್ಧಿ ಮುಖ್ಯಾಂಶಗಳು
ಯೋಜನೆ: ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ-52 ರ ಚತುಷ್ಪಥ (4-Lane) ಅಭಿವೃದ್ಧಿ.
ಒಟ್ಟು ಉದ್ದ: ಅಂದಾಜು 199 ಕಿಲೋಮೀಟರ್ ರಸ್ತೆ ವಿಸ್ತರಣೆ.
ಅನುಕೂಲ ಪಡೆಯುವ ಜಿಲ್ಲೆಗಳು: ಧಾರವಾಡ, ಗದಗ, ಬಾಗಲಕೋಟೆ ಮತ್ತು ವಿಜಯಪುರ.
ವಿಶೇಷತೆ: ಟ್ರಾಫಿಕ್ ಮುಕ್ತ ಸಂಚಾರಕ್ಕಾಗಿ ನವಲಗುಂದ ಮತ್ತು ನರಗುಂದ ಪಟ್ಟಣಗಳಿಗೆ ಹೊಸ ಬೈಪಾಸ್ ರಸ್ತೆ ನಿರ್ಮಾಣ.




