Narendra Modi: ಕಾಶಿ ನನ್ನದು ಎಂದು ಹೇಳುತ್ತಲೇ ಬರೋಬ್ಬರಿ ₹3884 ಕೋಟಿ ಅನುದಾನ ಘೋಷಿಸಿದ ಪ್ರಧಾನಿ ಮೋದಿ!

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ವಾರಣಾಸಿಗೆ (Modi in Varanasi) ಭೇಟಿ ನೀಡಿ ಬರೋಬ್ಬರಿ 3,884.18 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು,
ಭೋಜ್ಪುರಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವುದರಿಂದ ಹಿಡಿದು ಪ್ರಮುಖ ಮೂಲಸೌಕರ್ಯ ಕಾಮಗಾರಿಗಳಿಗೆ ಅಡಿಪಾಯ ಹಾಕುವವರೆಗೆ ಪ್ರಧಾನಿಯವರ ಭೇಟಿ ಅನೇಕ ಮಹತ್ವ ಪಡೆಯಿತು. ವಾರಣಾಸಿಯಲ್ಲಿ 3,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಪ್ರಧಾನಿ ಮೋದಿ, ‘ಕಾಶಿ ಉಜ್ವಲ ಭವಿಷ್ಯವನ್ನು ಸೃಷ್ಟಿಸುವತ್ತ ಹೆಜ್ಜೆ ಹಾಕಿದೆ. ನಮ್ಮ ಕಾಶಿ ಈಗ ಪ್ರಾಚೀನವಾದುದು ಮಾತ್ರವಲ್ಲದೆ ಪ್ರಗತಿಪರವೂ ಆಗಿದೆ. ಕಾಶಿಯ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಈಗ ಕಾಶಿ ಪೂರ್ವಾಂಚಲ್ನ ಆರ್ಥಿಕ ಕೇಂದ್ರವಾಗಿದೆ. ಬಾಬಾ ಅವರೇ ನಡೆಸುತ್ತಿರುವ ಕಾಶಿ, ಪೂರ್ವಾಂಚಲ್ನ ಆರ್ಥಿಕ ಹಗ್ಗಗಳನ್ನು ಎಳೆಯುತ್ತಿದೆ ಎಂದು ಹೇಳಿದರು.