ದೇಶ
ಪಾಕಿಸ್ತಾನದ 12 ನಗರಗಳಲ್ಲಿ ಭಾರೀ ಸ್ಫೋಟ-ತುರ್ತು ಸಭೆ ಕರೆದ ಪಾಕ್ ಪ್ರಧಾನಿ

ಕರಾಚಿ: ಪೆಹಲ್ಲಾಮ್ ದಾಳಿಗೆ ಪ್ರತಿಕಾರವಾಗಿ ಭಾರತದ ಸೇನೆಯು ಪಾಕಿಸ್ತಾನ ಮೇಲೆ ಸಮರೋಪಾದಿ ದಾಳಿ ನಡೆಸಿದೆ. ಲಾಹೋರ್ ಇಸ್ಲಾಮಾಬದ್, ರಾವಲ್ಪಿಂಡಿ ಸೇರಿದಂತೆ ಸುಮಾರು 12 ನಗರಗಳ ಮೇಲೆ ಬಾಂಬ್ ದಾಳಿ ಮಾಡಲಾಗಿದೆ. ಅನೇಕ ಸಾವು-ನೋವುಗಳು ಸಂಭವಿಸಿವೆ ಎಂದ ವರದಿಯಾಗಿದೆ.
ಈ ನಡುವೆ ಸ್ಫೋಟದ ದಾಳಿಗಳು ಇನ್ನೂ ಉಲ್ಬಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ತುರ್ತು ಸಭೆ ಕರೆದಿದ್ದಾರೆ. ಕರಾಚಿ ಮತ್ತು ಲಾಹೋರ್, ಗುಜ್ರಾನ್ವಾಲಾ, ಚಕ್ವಾಲ್, ಅಟ್ಟಾಕ್, ಬಹವಾಲ್ಪುರ್, ಮಿಯಾನೋ ಮತ್ತು ಚೋರ್‌ನಲ್ಲಿ ಸ್ಫೋಟಗಳು ಸಂಭವಿಸಿವೆ. ಡೋನ್ ಮೂಲಕ ಈ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಮಿಲಿಟರಿ ಹೇಳಿಕೊಂಡಿದೆ.