೨೨ರಂದು ಉಚಿತ ಹೃದಯ ತಪಾಸಣಾ ಶಿಬಿರ
ಹುಬ್ಬಳ್ಳಿ : ಧಾರವಾಡ ಜಿಲ್ಲಾ ದೇವಾಂಗ ಸಂಘ ಹುಬ್ಬಳ್ಳಿ ಹಾಗೂ ಎಸ್ಡಿಎಂ ನಾರಾಯಣ ಹಾರ್ಟ ಸೆಂಟರ್ ಧಾರವಾಡ ಇವರ ಸಹಯೋಗದಲ್ಲಿ ಜೂ. ೨೨ರಂದು ಬೆಳಿಗ್ಗೆ ೯ರಿಂದ ಮಧ್ಯಾಹ್ನ ೨ ಗಂಟೆವರೆಗೆ ಎಸ್ಡಿಎಂ ಹಾರ್ಟ ಸೆಂಟರ್ನಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ದೇವಾಂಗ ಸಮಾಜ ಬಾಂಧವರಿಗೆ ಉಚಿತ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಎಂದು ಸಂಘದ ಅಧ್ಯಕ್ಷ ಡಾ.ಕೆ.ಜಿ. ಬ್ಯಾಕೋಡಿ ಅವರು, ದೇವಾಂಗ ಜಗದ್ಗರು, ಹಂಪಿ ಮಹಾಸಂಸ್ಥಾನ ಹೇಮಕೂಟದ ಪೀಠಾಧ್ಯಕ್ಷರಾದ ದಯಾನಂದ ಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ಶಿಬಿರ ಜರುಗಲಿದೆ ಎಂದರು.
ಶಿಬಿರದಲ್ಲಿ ರಕ್ತದೊತ್ತಡ(ಬಿಪಿ). ಮಧುಮೇಹ, ಇಸಿಜಿ ಹಾಗೂ ಹಾರ್ಟ ಸ್ಕ್ಯಾನ್ ಕೂಡ ಪರೀಕ್ಷಿಸಲಾಗುತ್ತಿದೆ. ತಜ್ಞ ವೈದ್ಯರಾದ ಡಾ.ವಿವೇಕಾನಂದ ಗಜಪತಿ, ಡಾ.ಮುರಳಿಧರ ನಾಯಕ, ಡಾ.ಶಶಿಕುಮಾರ ಪಟ್ಟಣಶೆಟ್ಟಿ, ಡಾ.ಕೀರ್ತಿ ಪಿ.ಎಲ್., ಡಾ.ಪ್ರಮೋದ ಹುನ್ನೂರ, ಡಾ. ಮಹಾಂತೇಶ ಉಳ್ಳಾಗಡ್ಡಿ ಇವರು ಪಾಲ್ಗೊಂಡು ಶಿಬಿರಾರ್ಥಿಗಳೊಂದಿಗೆ ಆರೋಗ್ಯ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಿದರು.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ವಿಜಯನಗರ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ದೇವಾಂಗ ಸಮಾಜ ಬಾಂಧವರು ಹೃದಯ ಖಾಯಿಲೆಗೆ ಸಂಬಂಧಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಮಾಹಿತಿಗಾಗಿ ೮೭೬೨೧೯೫೬೩೦, ೭೭೬೦೩೩೧೪೪೧ ಮೊಬೈಲ್ಗೆ ಸಂಪರ್ಕಿಸಲು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಬೋರಣ್ಣವರ, ನಾಗೇಶ ಬಾಪ್ರಿ, ಶಿವಶಂಕರ ಪಾತಾಳಿ, ರಮೇಶ ಕೂಡಲಗಿ, ರವೀಂದ್ರ ಪಾಟೀಲ ಇದ್ದರು.



