ಉನ್ನತ ಸುದ್ದಿ
Trending
ದಾವಣಗೆರೆ,: ಪತ್ರಿಕಾ ದಿನಾಚರಣೆಯ ಅಂಗವಾಗಿ, ಪತ್ರಕರ್ತರಿಗಾಗಿ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರಕ್ಕೆ ಇಂದು ಎಸ್ ಎಸ್ ನಾರಾಯಣ ಹೆಲ್ತ್ ಸೂಪರ್‌ಸ್ಪೆಷಾಲಿಟಿ ಸೆಂಟರ್‌ನಲ್ಲಿ ಚಾಲನೆ ನೀಡಲಾಯಿತು.
ಸಮಾಜದ ಅವಿಭಾಜ್ಯ ಅಂಗವಾಗಿರುವ ಮತ್ತು ಅದರ ಸುಧಾರಣೆಗಾಗಿ ಶ್ರಮಿಸುವ ಪತ್ರಕರ್ತರು, ಕೆಲಸದ ಒತ್ತಡ ಮತ್ತುಡೆಡ್‌ಲೈನ್ ನ ಕಾರಣದಿಂದಾಗಿ ತಮ್ಮ ಆರೋಗ್ಯ ಪರ ಕಾಳಜಿ ವಹಿಸುವುದು ಕಡಿಮೆ.

ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ, ಪತ್ರಕರ್ತರಿಗೆ ಇತ್ತೀಚೆಗೆ ಈ ಶಿಬಿರದ ಕೂಪನ್‌ಗಳನ್ನು ವಿತರಿಸಲಾಗಿದ್ದು, ಅವು ಜುಲೈ 31 ರವರೆಗೆ ಮಾನ್ಯವಾಗಿರುತ್ತವೆ. ಈ ಆರೋಗ್ಯ ತಪಾಸಣೆಯು ಇಸಿಜಿ (ECG), ಇಕೋ (ECHO), ರಕ್ತದೊತ್ತಡ (BP), ಜಿಆರ್‌ಬಿಎಸ್ (GRBS) ಮತ್ತು ವೈದ್ಯರೊಂದಿಗಿನ ಸಮಾಲೋಚನೆಯನ್ನು ಒಳಗೊಂಡಿದೆ. ಇದರ ಜೊತೆಗೆ, ವೈದ್ಯರ ಸಲಹೆಯ ಮೇರೆಗೆ ಟಿಎಂಟಿ (TMT – ಟ್ರೆಡ್‌ಮಿಲ್ ಟೆಸ್ಟ್) ಅಗತ್ಯವಿರುವ ಪತ್ರಕರ್ತರಿಗೆ ಶೇ. 50 ರಷ್ಟು ರಿಯಾಯಿತಿ ನೀಡಲಾಗುವುದು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸುನಿಲ್ ಭಂಡಾರಿಗಲ್ ಅವರು ದಾವಣಗೆರೆ ಗಿಲ್ಡ್‌ನ ಎಲ್ಲಾ ಪತ್ರಕರ್ತರು ಈ ಶಿಬಿರದ ಲಾಭ ಪಡೆಯುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9901662045.