ಉನ್ನತ ಸುದ್ದಿ
Trending
ಹುಬ್ಬಳ್ಳಿಯಲ್ಲಿ ಕಮರ್ಶಿಯಲ್ ಟ್ಯಾಕ್ಸ್ ಅಧಿಕಾರಿಯ ಮನೆ ಮೇಲೆ ಲೋಕಾಯುಕ್ತ ದಾಳಿ ₹52 ಲಕ್ಷ ನಗದು ಪತ್ತೆ
ಹುಬ್ಬಳ್ಳಿ: ಕೊಪ್ಪಳ ಜಿಲ್ಲಾ ಇಂಡಸ್ಟ್ರಿಯಲ್ & ಕಮರ್ಶಿಯಲ್ ಟ್ಯಾಕ್ಸ್ ಉಪ ನಿರ್ದೇಶಕ ಎಸ್. ಎಂ. ಚವ್ಹಾಣ್ ಅವರ ಹುಬ್ಬಳ್ಳಿಯ ನಿವಾಸದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ದಾಳಿಯ ವೇಳೆ ₹52 ಲಕ್ಷಕ್ಕಿಂತ ಹೆಚ್ಚು ನಗದು ಪತ್ತೆಯಾಗಿದೆ.

ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ದಾಳಿಗೆ ಮುಂದಾಗಿ, ಮನೆ ಮೂಲೆ ಮೂಲೆಗಳನ್ನು ಪರಿಶೀಲಿಸುತ್ತಿದೆ. ದೊರೆತ ನಗದು ನೋಟುಗಳನ್ನು ಕಂತು ಕಂತಾಗಿ ಎಣಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಇಂತಹ ಪ್ರಮಾಣದ ಹಣ ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಳಿಯು ಇನ್ನೂ ಮುಂದುವರಿದಿದ್ದು, ಆಸ್ತಿ ವಿವರಗಳ ಪರಿಶೀಲನೆಯು ಸಹ ನಡೆಯುತ್ತಿದ್ದು ತನಿಖೆ ತೀವ್ರಗೊಳ್ಳುತ್ತಿದೆ.