Welcome to Times of karnataka   Click to listen highlighted text! Welcome to Times of karnataka
Uncategorized
Trending

ಕಬ್ಬನ್ ಪಾರ್ಕ್ ನಲ್ಲಿ ನಡುರಸ್ತೆಯಲ್ಲಿ ಹುಡುಗಿಯರನ್ನು ಥಳಿಸಲಾಗಿದೆ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಸಿದ್ಧ ಕಬ್ಬನ್ ಪಾರ್ಕ್‌ನಲ್ಲಿ ಭಾನುವಾರ ವಿಶ್ರಾಂತಿ ಪಡೆಯಲು ಸಾವಿರಾರು ಜನರು ಸೇರಿದ್ದರು. ಆದರೆ ನಿನ್ನೆ ಅಲ್ಲಿಗೆ ಬಂದಿದ್ದ ಸಾರ್ವಜನಿಕರಿಗೆ ಅನಿರೀಕ್ಷಿತ ಆಘಾತ ಕಾದಿತ್ತು.

ರಸ್ತೆಯಲ್ಲಿ ಹುಡುಗಿಯರು ಜಗಳವಾಡುತ್ತಿದ್ದ ಘಟನೆಯನ್ನು ನೋಡಿದ ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ‘ಜಡೆ’ಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಆಗಿದ್ದು, ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ.

ನೂರಾರು ಜನರ ಮಧ್ಯೆ ಇಬ್ಬರು ಹುಡುಗಿಯರು ಬೀದಿಯಲ್ಲಿ ಜಗಳವಾಡಲು ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಶಾಂತವಾಗಿರಬೇಕಿದ್ದ ಉದ್ಯಾನವನದ ವಾತಾವರಣವು ಸ್ವಲ್ಪ ಸಮಯದವರೆಗೆ ಅಸ್ತವ್ಯಸ್ತವಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!