Welcome to Times of karnataka   Click to listen highlighted text! Welcome to Times of karnataka
ಅಪರಾಧ
Trending

ಹುಬ್ಬಳ್ಳಿ: ಇಡೀ ಛೋಟಾ ಮುಂಬೈ ಹುಬ್ಬಳ್ಳಿಯನ್ನೇ ಬೆಚ್ಚಿ ಬಿಳಿಸಿದ ಮರ್ಡರ್ ಕೇಸ್‌ ಕೊಲೆಗಾರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹುಬ್ಬಳ್ಳಿ: ಇಡೀ ಛೋಟಾ ಮುಂಬೈ ಹುಬ್ಬಳ್ಳಿಯನ್ನೇ ಬೆಚ್ಚಿ ಬಿಳಿಸಿದ ಮರ್ಡರ್ ಕೇಸ್‌ ಕೊಲೆಗಾರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೌದು,ಕಳೆದ ಶುಕ್ರವಾರ ಮಟ ಮಟ ಮದ್ಯಾಹ್ನವೇ ನಡು ರಸ್ತೆಯಲ್ಲಿಯೇ ಯುವಕನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಎಸಿಪಿ ಶಿವಾನಂದ ಚಲವಾದಿ ನೇತೃತ್ವದ ತಂಡ ಇಂದು ವಶಕ್ಕೆ ಪಡೆದಿದ್ದಾರೆ.

ಕೊಲೆ ಮಾಡಿದ ಆರೋಪಿಗಳು ಹುಬ್ಬಳ್ಳಿಯ ಈಶ್ವರ ನಗರದ ವೀರೇಂದ್ರ ಮಟ್ಟಿ ತಳಕಲ್ ಹಾಗೂ ದೀಪಕ್ ಛಲವಾದಿ ಎಂದು ಹೇಳಲಾಗುತ್ತಿದೆ. ಕೊಲೆಯಾದ ದಾದಾಪೀರ ಮಾರುತಿ ತಳಕಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದವನು. 2015 ರಲ್ಲಿ ಈಶ್ವರ ನಗರದ ಮಾರುತಿ ತಳಕಲ್ ಕೊಲೆ ನಡೆದಿತ್ತು. ಆ ಪ್ರಕರಣದಲ್ಲಿ ದಾದಾಪೀರ ಮೊದಲ ಆರೋಪಿಯಾಗಿದ್ದನು, ನಂತರ ಆ ಕೊಲೆ ಪ್ರಕರಣ ರಾಜೀ ನಡೆದು ಕೇಸ್ ಖುಲಾಸೆಯಾಗಿತ್ತು.

ಅದೇ ದ್ವೇಷದಿಂದಲೇ ದಾದಾಪೀರನ ಕೊಲೆ ನಡೆದಿರಬಹುದು ಎನ್ನಲಾಗಿದೆ.

ಈಗ ಪೋಲೀಸರ ಕೈಗೆ ಸಿಕ್ಕಿರುವ ಆರೋಪಿ ವೀರೇಂದ್ರ ಮಟ್ಟಿ ತಳಕಲ್ ಈ ಹಿಂದೆ ಕೊಲೆಯಾಗಿದ್ದ ಮಾರುತಿ ತಳಕಲ್ಲ ಸಹೋದರ. ಇನ್ನೊಬ್ಬ ಆರೋಪಿ ದೀಪಕ ಚಲವಾದಿ ಮಾರುತಿ ಚಲವಾದ ಅವರ ಅಳಿಯ ಎನ್ನಲಾಗಿದೆ. ಈಗಾಗಲೇ ಪೊಲೀಸರು ಇಬ್ಬರನ್ನೂ ಹುಬ್ಬಳ್ಳಿಯ ಗಬ್ಬರ ಬೈಪಾಸ ಬಳಿ ವಶಕ್ಕೆ ಪಡೆದು ಕೊಲೆಗೆ ಕಾರಣವನ್ನು ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!