ಹುಬ್ಬಳ್ಳಿ: ಸರ್ಕಾರಿ ನಕ್ಷೆಯಲ್ಲಿ ರಸ್ತೆ… ಸ್ಥಳದಲ್ಲಿ ಕಚೇರಿ! ಹುಬ್ಬಳ್ಳಿ ಕಾರ್ಪೊರೇಟರ್ ವಿರುದ್ಧ ನಿವಾಸಿಗಳ ಗಂಭೀರ ಆರೋಪ
ಹುಬ್ಬಳ್ಳಿ: ಸರ್ಕಾರಿ ನಕ್ಷೆಯಲ್ಲಿ ರಸ್ತೆ… ಸ್ಥಳದಲ್ಲಿ ಕಚೇರಿ! ಹುಬ್ಬಳ್ಳಿ ಕಾರ್ಪೊರೇಟರ್ ವಿರುದ್ಧ ನಿವಾಸಿಗಳ ಗಂಭೀರ ಆರೋಪo ws
ಹುಬ್ಬಳ್ಳಿ: ಜನ ನಾಯಕ ಯಾವತ್ತಿದ್ರೂ ಜನಪರ ಕಾರ್ಯ ಮಾಡಬೇಕು. ಅಂತದ್ರಲ್ಲಿಈ ಕಾರ್ಪೊರೇಟರ್ ಸರ್ಕಾರಿ ರಸ್ತೆಯನ್ನೇ ಕಬಳಿಸಿ ಕಚೇರಿ ಕಟ್ಟುತ್ತಿರುವ ಆರೋಪ ಕೇಳಿ ಬಂದಿದೆ. ವಾರ್ಡ್ ನಂಬರ್ 51ರ ಕಾರ್ಪೊರೇಟರ್ ಸಂದೀಲ್‌ಕುಮಾರ್ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಪ್ರಿಯದರ್ಶಿನಿ ಕಾಲೋನಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಸಾರ್ವಜನಿಕರಿಗೆ ಸೇರಿದ್ದರೂ, ಡೆಡ್ ಎಂಡ್ ಪ್ರದೇಶವೆಂಬ ಕಾರಣಕ್ಕೆ ಯಾವುದೋ ಸಂಘಟನೆ ಅಲ್ಲಿ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನುವುದು ನಿವಾಸಿಗಳ ಆರೋಪ.
ಹೌದು,,,, ಹುಬ್ಬಳ್ಳಿಯ ವಾರ್ಡ್ ನಂಬರ 51 ರಲ್ಲಿ ಬರುವ ಪ್ರಿಯದರ್ಶಿನಿ ಕಾಲೋನಿ, ಇಲ್ಲಿನ ರಸ್ತೆಯೇ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
ನಕ್ಷೆಯ ಪ್ರಕಾರ ಸಾರ್ವಜನಿಕ ರಸ್ತೆಯಾಗಿ ಗುರುತಿಸಲಾಗಿರುವ ಜಾಗವನ್ನು ಅತಿಕ್ರಮಿಸಿಕೊಂಡು ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕಾರ್ಪೊರೇಟರ್ ಸಂದೀಲ್‌ಕುಮಾರ್ ವಿರುದ್ಧ ಕೇಳಿಬಂದಿದೆ. ಯಾರೋ ಸಂಘಟನೆ ರಸ್ತೆ ಡೆಡ್ ಎಂಡ್ ಪ್ರದೇಶದಲ್ಲಿದೆ ಎಂಬ ಕಾರಣಕ್ಕೆ ದಿನಂಪ್ರತಿ ಓಡಾಡುವ ರಸ್ತೆಯಲ್ಲಿ ಕಚೇರಿ ಕಟ್ಟಲು ಮುಂದಾಗಿದ್ದಾರೆ. ಇದಕ್ಕೆ ಕಾರ್ಪೊರೇಟರ್ ಅವರು ಕೂಡ ಸಾಥ್ ನೀಡಿರು ಆರೋಪ ಕೇಳಿ ಬಂದಿದೆ. ಇದನ್ನು ವಿರೋಧಿಸಿದಕ್ಕೆ ವೀರೇಶ ಚಳಗೇರಿ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರಂತೆ. ಅಷ್ಟೇ ಅಲ್ದೆ ಅಲ್ಲಿದ್ದ ಬೃಹತ್ ಮಾವಿನ ಮರವನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಕಡೆಸಿದ್ದಾರಂತೆ. ಈಗ ಇದ್ದ ರಸ್ತೆಯಲ್ಲಿ ಯಾರಿಗೂ ಓಡಾಡಲು ಆಗದಂತೆ ರಸ್ತೆಯಲ್ಲಿ ಕಚೇರಿ ಕಟ್ಟಲು ತಗ್ಗು ತೆಗೆದಿದ್ದಾರೆ. ಈ ಕಾರ್ಪೊರೇಟರ್ ಸಂದೀಲ್ ಕುಮಾರ್ ತೋರಿದ ಧರ್ಪ ವಿಡಿಯೋದಲ್ಲಿ ಕೂಡ ಸೆರೆಯಾಗಿದೆ. ಅಷ್ಟಕ್ಕೂ ಅಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯ ನಿವಾಸಿಗಳು ಅನ್ಯಾಯಕ್ಕೆ ಒಳಗಾದ ಕುಟುಂಬ ತಮ್ಮ ಅಳಲನ್ನು ತೋಡಿಕೊಂಡಿದೆ.
ಇನ್ನು ಈ ಅಕ್ರಮ ಕಾರ್ಯಕ್ಕೆ ಅಡ್ಡಿಯಾಗಿದ್ದ ಈ ಕುಟುಂಬದ ಮೇಲೆ ಕೆಲವೊಂದಿಷ್ಟು ಜನರು ಬಂದು ಸಂಘಟನೆ ಹೆಸರು ಹೇಳಿ ಅವಾಜ್ ಹಾಕ್ತಿದ್ದಾರಂತೆ. ಈ ಬಗ್ಗೆ ಈ ಚಳಗೇರಿ ಕುಟುಂಬ ಪಾಲಿಕೆ ಆಯುಕ್ತರಿಗೆ, ಗೋಕುಲ ರೋಡ್ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದಾರೆ. ಸರ್ಕಾರಿ ನಕ್ಷೆ ಪ್ರಕಾರ ಈ ಜಾಗ ಸಾರ್ವಜನಿಕ ರಸ್ತೆ ಅಂತ ಇದೆ. ಆದ್ರೆ ಕಾರ್ಪೊರೇಟರ್ ಯಾಕೆ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದಾರೆ…? ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಪಾಲಿಕೆ ಆಯುಕ್ತರ ಇತ್ತ ಗಮನಿಸಿ ಸರ್ಕಾರಿ ಜಾಗವನ್ನು ಉಳಿಸಬೇಕಿದೆ.
